ಕಿಡಿಗೇಡಿಗಳಿಂದ ತೆಂಗಿನ ತೋಟ ಧ್ವಂಸ

ಈ ಸುದ್ದಿಯನ್ನು ಶೇರ್ ಮಾಡಿ

turvrkere-coconet

ತುರುವೇಕೆರೆ,ಆ.29- ಜಮೀನಿನಲ್ಲಿ ನೆಟ್ಟಿದ್ದ ತೆಂಗಿನ ಸಸಿಗಳನ್ನು ಕೆಲವು ಕಿಡಿ ಕೇಡಿಗಳು ಕಿತ್ತು ಹಾಕಿದ್ದಾರೆ ಎಂದು ತಾಲೂಕಿನ ಮಾಯಸಂದ್ರ ಹೋಬಳಿಯ ಸೊಂಡೆಮಾರ್ಗೋನಹಳ್ಳಿಯ ರೈತ ಗೋವಿಂದಪ್ಪಆರೋಪಿಸಿದ್ದಾರೆ. ಸುಮಾರು 20 ವರ್ಷಗಳಿಂದ ಈ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದು, ಸದರಿ ಜಮೀನಿನಲ್ಲಿ ಸರ್ಕಾರದ ವತಿಯಿಂದ ನೀಡುವ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಯನ್ನು ಕೊರೆಸಿ ಕೃಷಿ ಹೊಂಡವನ್ನು ಸಹ ನಿರ್ಮಿಸಲಾಗಿದೆ.

ಕಿಡಿಗೇಡಿಗಳು ಜಮೀನಿನಲ್ಲಿ ನೆಟ್ಟಿದ್ದ 50ಕ್ಕೂ ಹೆಚ್ಚಿನ ತೆಂಗಿನ ಸಸಿಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ದೂರಿದ್ದಾರೆ.  ಈ ಬಗ್ಗೆ ಪಟ್ಟಣ ಠಾಣೆಗೆ ದೂರು ನೀಡಿದ್ದು, ಪೊಲಿಸರು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಅಳಲು ತೋಡಿಕೊಂಡರು. ಇದೇ ವೇಳೆ ತಿಮ್ಮಯ್ಯ, ಗಂಗಣ್ಣ, ಗೌರಮ್ಮ, ಶ್ರೀನಿವಾಸು, ಮಣೆಚೆಂಡೂರು ಕರಿಯಪ್ಪ ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin