ಕಿರಣ್‍ಬೇಡಿ ಕ್ಷಮೆಯಾಚಿಸಲಿ : ದ್ವಾರಕಾನಾಥ್

ಈ ಸುದ್ದಿಯನ್ನು ಶೇರ್ ಮಾಡಿ

sdgasdfgsg

ಬೆಂಗಳೂರು, ಆ.9-ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್‍ಬೇಡಿಯವರು  ಬುಡಕಟ್ಟುಗಳ ಬಗ್ಗೆ  ಅವಹೇಳನಕಾರಿಯಾಗಿ ಮಾತನಾಡಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಹಿರಿಯ ವಕೀಲ ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಇಂದಿಲ್ಲಿ ಆರೋಪಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರು ಇತ್ತೀಚೆಗಷ್ಟೆ ಡಿನೋಟಿಫೈಡ್ ಬುಡಕಟ್ಟುಗಳನ್ನು ಅಪಮಾನಿಸಿ ನಿಂದಿಸುವ ರೀತಿಯಲ್ಲಿ ಟ್ವೀಟ್ ಮಾಡಿ ಅಲೆಮಾರಿ ಮತ್ತು ಆದಿವಾಸಿ ಸಮುದಾಯ ಗಳ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದರು. ಭಾರತದ ಸಂವಿಧಾನವು ಜಾತಿ, ಧರ್ಮ, ಲಿಂಗ, ಭಾಷೆಗಳ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ.

ಆದರೆ ಕಿರಣ್‍ಬೇಡಿಯವರು ಹಳೆಯ ಯಾವುದೋ ಪ್ರಕರಣಗಳನ್ನು ಮುಂದಿಟ್ಟುಕೊಂಡು ಒಟ್ಟಾರೆ ಸಮುದಾಯವ್ಞನ್ನು ಅಲ್ಲಗಳೆಯುವುದು ಸರಿಯಲ್ಲ. ಇವರ ಜಾತಿ ನಿಂದನೆ ಮಾತುಗಳು ನಾವು ಖಂಡಿಸುತ್ತೇವೆ. ಕೂಡಲೇ ಕಿರಣ್‍ಬೇಡಿಯವರು ಡಿನೋಟಿಫೈಡ್ ಸಮುದಾಯಗಳ ಕ್ಷಮೆಯಾಚಿಸಿ ತಮ್ಮ ಮಾತುಗಳನ್ನು ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದರು.
ಭೌತಶಾಸ್ತ್ರ ಅಧ್ಯಾಪಕ ಡಾ.ಟಿ.ಎನ್. ಚಂದ್ರಕಾಂತ್, ಸಮಾಜ ಕಾರ್ಯಕರ್ತೆಯರಾದ ಎಸ್.ಸತ್ಯಾ, ಕಾವೇರಿ ಕೊಡಗು, ವಾಲ್ಮೀಕಿ ಸಮುದಾಯದ ಬಿ.ಗೋಪಾಲ್, ಹರ್ಷಕುಮಾರ್ ಕುಗ್ವೆ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin