ಕಿಲಾಡಿಯ ಜತೆ 4 ಮುದ್ದು ಮರಿಗಳ ಬಾಕ್ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

akshay-kumar

ಹಿಂದಿ ಚಿತ್ರ ತಾರೆಯರಿಗೂ ಸಾಕು ಪ್ರಾಣಿಗಳಿಗೂ ಮೊದಲಿನಿಂದಲೂ ನಂಟು. ಬಹುತೇಕ ಎಲ್ಲ ನಟ-ನಟಿಯರು ಮುದ್ದಾದ ಪ್ರಾಣಿಗಳನ್ನು ಪೋಷಿಸುತ್ತಿದ್ದಾರೆ. ಇದಕ್ಕೆ ಬಾಲಿವುಡ್‍ನ ಕಿಲಾಡಿಯೋಂಕಾ ಕಿಲಾಡಿ ಆ್ಯಕ್ಷನ್ ಕಿಂಗ್ ಅಕ್ಷಯ್‍ಕುಮಾರ್ ಹೊರತಲ್ಲ. ಪ್ರತಿದಿನ ಫಿಟ್‍ನೆಸ್ ವ್ಯಾಯಾಮ ಮಾಡುವ ಅಕ್ಕಿ ಈಗ ಮುದ್ದಾದ ನಾಲ್ಕು ನಾಯಿ ಮರಿಗಳೊಂದಿಗೆ ಬಾಕ್ಸಿಂಗ್ ಪಂಚ್‍ಗಳನ್ನು ಅಭ್ಯಾಸ ಮಾಡುತ್ತಿದ್ದಾನೆ. ನಾಲ್ಕು ನಾಯಿ ಮರಿಗಳೊಂದಿಗೆ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿರುವ ದೃಶ್ಯ ಮತ್ತು ಪೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಕ್ಕಿ ಪೋಸ್ಟ್ ಮಾಡಿ ಇದು ಇಂದಿನ ವರ್ಕ್‍ಔಟ್. ಇಂಥ ಮುದ್ದಾದ ಪುಟ್ಟ ಗೂಂಡಾಗಳೊಂದಿಗೆ ಬಾಕ್ಸಿಂಗ್ ಮಾಡಿದೆ. ಫಗ್‍ಲೈಫ್ ಥಗ್‍ಲೈಫ್ ಎಂಬ ಅಡಿಬರಹ ಈ ದೃಶ್ಯದ ಕೆಳಗಿದೆ. ಯುವ ಜನಾಂಗಕ್ಕೆ ಬಹು ಸಮಯದಿಂದಲೂ ಫಿಟ್‍ನೆಸ್ ಮಾಡೆಲ್ ಆಗಿರುವ ಅಕ್ಷಯ್ ತನ್ನದೇ ಆದ ಶಿಸ್ತುಬದ್ಧ ಜೀವನಶೈಲಿ ಅಳವಡಿಸಿಕೊಂಡಿದ್ದಾನೆ. ಜೊತೆಗೆ ವ್ಯಾಯಾಮ ಈತನ ದಿನನಿತ್ಯದ ಅನಿವಾರ್ಯ ದಿನಚರಿ. ಇದರ ನಡುವೆಯೂ ಸಾಕುಪ್ರಾಣಿಗಳ ಒಡನಾಟ ಇಟ್ಟುಕೊಂಡಿರುವುದು ಕೂಡ ಈತನ ಕಿಲಾಡಿತನಕ್ಕೆ ಸಾಕ್ಷಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin