ಕೀರ್ತಿಲಾಲ್ಸ್ ವರ್ಷಾಚರಣೆ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

lock

ಬೆಂಗಳೂರು, ಆ.19-ಭಾರತದ ಪ್ರಸಿದ್ಧ ವಜ್ರಾಭರಣ ಬ್ರಾಂಡ್ ಆಗಿರುವ ಕೀರ್ತಿಲಾಲ್ಸ್ ನಂಬಲಾಗದ ಬೆಲೆಯಲ್ಲಿ ಆಕರ್ಷಕ ಹಗುರ ತೂಕದ ವಜ್ರದ ನಕ್ಲೇಸ್ಗಳೊಂದಿಗೆ ಬೆಂಗಳೂರಿನಲ್ಲಿ ತನ್ನ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ವಿನ್ಯಾಸದಲ್ಲಿ ಮತ್ತು ಸಮಕಾಲೀನ ಶೈಲಿಗಳಲ್ಲಿ ಬಹು ಬೇಡಿಕೆಯ ಹೊಳೆಯುವ ವಜ್ರದ ನಕ್ಲೇಸ್ಗಳನ್ನು ಪ್ರದರ್ಶಿಸಿತು.  ನಮ್ಮ ಗ್ರಾಹಕರಿಗೆ ಸಮಂಜಸ ಬೆಲೆಯಲ್ಲಿ ಡೈಮಂಡ್ ನಕ್ಲೇಸ್ಗಳ ಹೊಸ ಶ್ರೇಣಿಯನ್ನು ನೀಡಲು ನಮಗೆ ಸಂತೋಷ ಎನಿಸುತ್ತದೆ. ವಜ್ರದ ಆಭರಣಕ್ಕೆ ಹೋಲಿಸಿದರೆ ಚಿನ್ನಾಭರಣವು ಹೆಚ್ಚು ಕೈಗೆಟಕುತ್ತದೆ ಎಂಬ ಗ್ರಹಿಕೆ ಇದೆ. ಆದಾಗ್ಯೂ, ಈ ಡೈಮಂಡ್ ನಕ್ಲೇಸ್ಗಳ ಅನಾವರಣದೊಂದಿಗೆ ಚಿನ್ನ ನಕ್ಲೇಸ್ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ ಎಂದು ಕೀರ್ತಿಲಾಲ್ಸ್ನ ವ್ಯವಹಾರಿಕ ಕಾರ್ಯತಂತ್ರ ವಿಭಾಗದ ನಿರ್ದೇಶಕ ಸೂರಜ್ ಶಾಂತಕುಮಾರ್ ತಿಳಿಸಿದರು.  ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅರುಣ್ಕುಮಾರ್ ಮಾತನಾಡಿ, ನಮ್ಮ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ನಾವು ಸದಾ ಶ್ರಮಿಸುತ್ತಿದ್ದೇವೆ ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin