ಕುಂದಾನಗರಿಯಲ್ಲಿ ಗಲಭೆ ಹಿನ್ನೆಲೆಯಲ್ಲಿ ಗಲ್ಲಿಗಲ್ಲಿಗೂ ಪೊಲೀಸರ ನಿಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

Belagavi--01

ಬೆಳಗಾವಿ, ನ.16-ಕ್ಷುಲ್ಲಕ ಕಾರಣಕ್ಕೆ ಕೋಮುಗಲಭೆ ಸಂಭವಿಸಿದ ಕುಂದಾನಗರಿ ಉದ್ವಿಗ್ನಗೊಂಡಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸ್ಥಳದಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಗಲಭೆಯಲ್ಲಿ ನಾಲ್ಕು ಬೈಕ್, ಒಂದು ಕಾರು, ಒಂದು ಆಟೋ ಬೆಂಕಿಗೆ ಆಹುತಿಯಾಗಿದ್ದು , ಇನ್ನಿತರ ಹಲವಾರು ವಾಹನಗಳು ಜಖಂಗೊಂಡಿವೆ.  ರಸ್ತೆಗಳಲ್ಲಿ ಕಲ್ಲು ಮತ್ತು ಗಾಜಿನ ಚೂರುಗಳು ಬಿದ್ದಿದ್ದು , ಓಡಾಡಲು ಆಗದಂತಹ ಪರಿಸ್ಥಿತಿ ಎದುರಾಗಿದೆ.

ತಡರಾತ್ರಿ ನಗರದ ಖಡಕ್‍ಗಲ್ಲಿ ಖಂಜಾರದಲ್ಲಿ ಮತ್ತು ಶಾಸ್ತ್ರಿ ಚೌಕ ಸುತ್ತಮುತ್ತ ಎರಡು ಕೋಮುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಭೆ ಸಂಭವಿಸಿ ಎರಡು ಗುಂಪಿನವರು ಪರಸ್ಪರ ಕಲ್ಲು ಮತ್ತು ಬಾಟಲ್ ತೂರಾಟ ನಡೆಸಿದ ಪರಿಣಾಮ ಪರಿಸ್ಥಿತಿ ಬಿಗಡಾಯಿಸಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸ್ ಆಯುಕ್ತ ಕೃಷ್ಣ ಭಟ್, ಡಿಸಿಪಿ ಅಮರನಾಥ ರೆಡ್ಡಿ, ಎಸಿಪಿ ಶಂಕರ್ ಮಾರಿಹಾಳ ಪರಿಸ್ಥಿತಿಯ ಅವಲೋಕನ ನಡೆಸಿದರು.

Belagavi--03

ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಪೊಲೀಸರ ಮೇಲೂ ಕಲ್ಲು ತೂರಿದ ಪರಿಣಾಮ ಪೊಲೀಸ್ ವಾಹನ ಜಖಂಗೊಂಡಿರುವುದಲ್ಲದೆ ಎಸಿಪಿ ಶಂಕರ ಮಾರಿಹಾಳ ಅವರಿಗೂ ಗಾಯವಾಗಿದೆ.  ಪರಿಸ್ಥಿತಿ ಬಿಗಡಾಯಿಸಿರುವುದನ್ನು ಮನಗಂಡು ಸ್ಥಳದಲ್ಲಿ ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು , ನಗರದ ಇತರ ಠಾಣೆಗಳ ಪೊಲೀಸರನ್ನು ಶಾಂತಿ ಪಾಲನೆ ಕರ್ತವ್ಯ ವಹಿಸಲಾಗಿದೆ. ಗಲಭೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ ಗಲಭೆ ಸೃಷ್ಟಿಸಿದ ಕೆಲ ಕಿಡಿಗೇಡಿಗಳ ವಿಡಿಯೋ ಲಭ್ಯವಾಗಿದ್ದು , ಕೂಡಲೇ ಅವರನ್ನು ಬಂಧಿಸಿ ಸ್ಥಳದಲ್ಲಿ ಶಾಂತಿ ಕಾಪಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

Facebook Comments

Sri Raghav

Admin