ಕುಂದಾನಗರಿ ಬೆಳಗಾವಿಯಲ್ಲಿ ಚುನಾವಣಾ ಭಾಷಣ ಮಾಡಿದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--Belagavi--01

ಬೆಳಗಾವಿ, ಮೇ 9- ದೇಶವನ್ನು ಲೂಟಿ ಹೊಡೆಯುವವರ ವಿರುದ್ಧ ನನ್ನ ಹೋರಾಟ ನಿರಂತರ, ಅವರನ್ನು ಮಟ್ಟ ಹಾಕುವವರೆಗೂ ನಾನು ದನಿಯುವುದೂ ಇಲ್ಲ , ನಿಲ್ಲುವುದೂ ಇಲ್ಲ , ಅಂತಹ ವ್ಯಕ್ತಿಗಳನ್ನು ಮಟ್ಟ ಹಾಕೇ ಹಾಕುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರಿಗಳ ವಿರುದ್ಧ ಸಮರ ಸಾರುತ್ತಲೇ ಬಂದಿದ್ದೇನೆ, ಅವರು ಲೂಟಿ ಹೊಡೆದಿರುವ ಸಂಪತ್ತನ್ನು ಮತ್ತೆ ದೇಶಕ್ಕೆ ತರುವವರೆಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

2022ರ ವೇಳೆಗೆ ಕಡುಬಡವರು, ಬಡವರು, ಮಾಧ್ಯಮ ವರ್ಗದವರಿರಲಿ ಯಾರಿಗೂ ಕೂಡ ಸೂರು ಇರದಂತಹ ಪರಿಸ್ಥಿತಿ ಇರಬಾರದೆಂದು ಎಂಬುದೇ ನನ್ನ ಸಂಕಲ್ಪ , ಕರ್ನಾಟಕ ಮುಖ್ಯಮಂತ್ರಿ ತಮ್ಮ ಸ್ವಂತ ಜಿಲ್ಲೆ ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದಾರೆ, ಗೆಲುವಿಗಾಗಿ ವಾಮ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.

ಕೋಟಿ ಕೋಟಿ ಹಣ, ಚಿನ್ನದ ಒಡವೆಗಳು ಸೇರಿದಂತೆ ಹಲವಾರು ಉತ್ಪನ್ನಗಳು ಈಗ ಜಫ್ತಿಯಾಗುತ್ತಿವೆ, ನಕಲಿ ವೋಟರ್ ಐಡಿಗಳು ಕೂಡ ಹೊರ ಬರುತ್ತಿರುವುದನ್ನು ನೋಡಿದರೆ ಎಂತಹ ಪರಿಸ್ಥಿತಿ ಎದುರಾಗಿದೆ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್‍ನ ಆಟವನ್ನು ಮಟ್ಟ ಹಾಕುವುದೇ ಏಕೈಕ ಗುರಿ ಎಂದು ಅವರು ತಿಳಿಸಿದರು.

Facebook Comments

Sri Raghav

Admin