ಕುಖ್ಯಾತ ಕಾಳಧನ ವಕೀಲ ರೋಹಿತ್ ಟಂಡನ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Rohit-Tandan

ನವದೆಹಲಿ, ಡಿ.29-ಪೊಲೀಸರು ಮತ್ತು ಆದಾಯ ತೆರಿಗೆ ಅಧಿಕಾರಿಗಳು ದೆಹಲಿಯ ಪ್ರತಿಷ್ಠಿತ ವಕೀಲರ ಕಚೇರಿಯೊಂದರ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ.ಗಳ ಕಾಳಧನ ಪತ್ತೆ ಮಾಡಿದ ನಂತರ ತಲೆಮರೆಸಿಕೊಂಡಿದ್ದ ವಿವಾದಾತ್ಮಕ ವಕೀಲ ರೋಹಿತ್ ಟಂಡನ್‍ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿನ್ನೆ ರಾತ್ರಿ ಬಂಧಿಸಿದ್ದಾರೆ. ದೆಹಲಿಯ ವಕೀಲರ ಕಚೇರಿ ಮೇಲೆ ಡಿ.10ರಂದು ನಡೆದ ದಾಳಿ ವೇಳೆ 13.6 ಕೋಟಿ ರೂ. ಹಳೆ ನೋಟುಗಳು ಪತ್ತೆಯಾಗಿತ್ತು. ರೋಹಿತ್ ಟಂಡನ್ ಒಡೆತನದ ಈ ವಕೀಲರ ಕಚೇರಿ, ನಿವಾಸ ಮತ್ತು ಇತರ ಕಾರ್ಯಾಲಯಗಳಲ್ಲಿ 70 ಕೋಟಿ ರೂ.ಗಳ ಕಾಳಧನ ಮತ್ತು ತೆರಿಗೆ ಪಾವತಿಸದ ಅಕ್ರಮ ಹಣ ಪತ್ತೆಯಾಗಿತ್ತು. ಈ ವ್ಯವಹಾರಗಳ ರೂವಾರಿಯಾಗಿದ್ದ ಟಂಡನ್ ಕೋಲ್ಕತ ಮೂಲದ ಉದ್ಯಮಿ ಪರಸ್ ಮಲ್ ಲೋಧಾ ಸೇರಿದಂತೆ ಅನೇಕ ಪ್ರಭಾವಿ ಉದ್ಯಮಿಗಳು ಮತ್ತು ವಿವಿಧ ಬ್ಯಾಂಕ್‍ಗಳ ಉನ್ನತಾಧಿಕಾರಿಗಳೊಂದಿಗೆ ಶಾಮೀಲಾಗಿ ಕಾಳಧನ ಮತ್ತು ಹವಾಲಾ ದಂಧೆಯಲ್ಲಿ ತೊಡಗಿದ್ದನು.

ಈ ಹಿಂದೆ ಇದೇ ಟಂಡನ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ಮುಂದೆ ತೆರಿಗೆ ಪಾವತಿಸದ 125 ಕೋಟಿ ರೂ.ಗಳ ಹಣವನ್ನು ಘೋಷಣೆ ಮಾಡಿ ಹುಬ್ಬೇರುವಂತೆ ಮಾಡಿದ್ದರು. ಹಿಂದಿನಿಂದಲೂ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವಹಿವಾಟು ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಟಂಡನ್ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡಿದ್ದರು.
ವಕೀಲರ ಕಚೇರಿ ಮೇಲೆ ದಾಳಿ ನಡೆದ ನಂತರ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ ಐಟಿ ಮತ್ತು ಇಡಿ ಅಧಿಕಾರಿಗಳು ಈ ಸಂಬಂಧ ಹಲವರನ್ನು ಬಂಧಿಸಿದ್ದರು.
ನÀಕಲಿ ಖಾತೆಗಳಲ್ಲಿ 34 ಕೋಟಿ ರೂ.ಗಳ ಅಕ್ರಮ ಠೇವಣಿ ಕುಮ್ಮಕ್ಕು ನೀಡಿ ಅಕ್ರಮ ಎಸಗಿದ ಆರೋಪದ ಮೇಲೆ ಕೋಟಕ್ ಮಹೀಂದ್ರಾ ಬ್ಯಾಂಕ್ ಶಾಖೆಯೊಂದರ ಮ್ಯಾನೇಜರ್‍ನನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದರು.

ರೋಹಿತ್ ಟಂಡನ್‍ನ ಕಾಳಧನವನ್ನು ಹೊಸ ಕರೆನ್ಸಿಯಾಗಿ ಪರಿವರ್ತಿಸಲು ಕುಮ್ಮಕ್ಕು ನೀಡಲಾಗಿದೆ ಎಂಬ ಆರೋಪದ ಮೇಲೆ ಕೋಟಕ್ ಮಹೀಂದ್ರಾ ಬ್ಯಾಂಕ್‍ನ ಕೆ.ಜಿ.ಮಾರ್ಗ್ ಶಾಖೆಯ ಮ್ಯಾನೇಜರ್‍ನನ್ನು ಹಣ ಅವ್ಯವಹಾರ ನಿಯಂತ್ರಣ ಕಾಯ್ದೆ (ಪಿಎಂಎಲ್‍ಎ) ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin