ಕುಟುಂಬದವರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಕುಡುಕ

ಈ ಸುದ್ದಿಯನ್ನು ಶೇರ್ ಮಾಡಿ

Bagalkot--01

ಬಾಗಲಕೋಟೆ,ಆ.17- ಕುಡಿತದ ಚಟವೊಂದಿದ್ದ ವ್ಯಕ್ತಿಯೊಬ್ಬ ಪತ್ನಿ, ಮಕ್ಕಳು ಹಾಗೂ ತಾಯಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುದೋಳ ತಾಲೂಕಿನ ನೆಲವಗಿ ಗ್ರಾಮದ ಬಸವರಾಜ್ ಮೊಕಾಶಿ(44) ಆತ್ಮಹತ್ಯೆ ಮಾಡಿಕೊಂಡ ಮದ್ಯವ್ಯಸನಿ. ಘಟನೆಯಲ್ಲಿ ಈತನ ಪತ್ನಿ ನಿರ್ಮಲಾ ಮೊಕಾಶಿ(35), ತಾಯಿ ರಂಗವ್ವ(65) ಮಕ್ಕಳಾದ ರೇಖಾ(12), ರಾಘವೇಂದ್ರ(8) ಇವರುಗಳಿಗೆ ಸುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬಸವರಾಜು ಪ್ರತಿನಿತ್ಯ ಕುಡಿದು ಬಂದು ಕುಟುಂಬಸ್ಥರೊಂದಿಗೆ ಜಗಳವಾಡುತ್ತಿದ್ದನ್ನಲ್ಲದೆ, ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.

Bagalkot--03

ಇಂದು ನಸುಕಿನ ಜಾವ ಪತ್ನಿಯ ಬಳಿ ಕುಡಿಯಲು ಹಣ ಕೇಳಿದ್ದಾನೆ. ಆಕೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಕುಪಿತಗೊಂಡು ಮಲಗಿದ್ದ ಮಕ್ಕಳು, ತಾಯಿ ಹಾಗೂ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಇವರು ಸತ್ತರೆ ಪೊಲೀಸರು ನನ್ನನ್ನು ಬಂಧಿಸುತ್ತಾರೆ ಎಂದು ಹೆದರಿ, ತಾನೂ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಇವರ ಮನೆಯಿಂದ ಚೀರಾಟ-ಕೂಗಾಟ ಕೇಳಿದ ನೆರೆಹೊರೆಯವರು ದೌಡಾಯಿಸಿ ಬೆಂಕಿ ನಂದಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಬಸವರಾಜನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇನ್ನುಳಿದವರು ಸುಟ್ಟಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಸಂಬಂಧ ಬಾದಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bagalkot--02

Facebook Comments

Sri Raghav

Admin