ಕುಡಿದು ಟೈಟಾಗಿ ಶಾಲೆಗೆ ಬಂದ ಹೆಡ್ ಮಾಸ್ಟರ್ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

adsgSDGDSG

ಚನ್ನಪಟ್ಟಣ, ಆ.19- ಕುಡಿದು ಶಾಲೆಗೆ ಆಗಮಿಸಿ, ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ ತೋರುತ್ತಿದ್ದ ಮುಖ್ಯಶಿಕ್ಷಕನನ್ನು ಬಿಇಓ ಅಮಾನತುಗೊಳಿಸಿದ್ದಾರೆ. ಪಟ್ಟಣದ ಕೋಟೆ ವರದರಾಜಸ್ವಾಮಿ ದೇವಾಲಯ ರಸ್ತೆಯ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ದೇವರಾಜು ಅಮಾನತುಗೊಂಡವರು. ಕುಡಿದು ಬಂದು ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ನಡೆದುಕೊಂಡ ಬಗ್ಗೆ ಪೋಷಕರು ಬಿಇಓ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ್ದ ಬಿಇಓ ಮಲ್ಲಿಕಾರ್ಜುನ್ ವಿಚಾರಣೆ ನಡೆಸಿದರು. ಆ ಸಂದರ್ಭದಲ್ಲಿಯೂ ಕುಡಿದಿದ್ದರಿಂದ ಅಮಾನತುಗೊಳಿಸಿದರು.
ಪೋಷಕರ ಮುತ್ತಿಗೆ:
ದೇವರಾಜು ಪ್ರತಿನಿತ್ಯ ಕುಡಿದು ಶಾಲೆಗೆ ಹಾಜರಾಗುತ್ತಾರೆ, ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ, ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಆತಂಕ ಎದುರಾಗಿದೆ, ಕೂಡಲೇ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಶಾಲೆಗೆ ಆಗಮಿಸಿದ್ದ ಬಿಇಓ ಅವರನ್ನು ಒತ್ತಾಯಿಸಿದರು.   ಬಿಇಓ ಮಲ್ಲಿಕಾರ್ಜುನ್ ಮಾತನಾಡಿ, ಪೋಷಕರು ನೀಡಿರುವ ದೂರಿನನ್ವಯ ಮುಖ್ಯಶಿಕ್ಷಕ ದೇವರಾಜು ಅವರನ್ನು ಅಮಾನತುಗೊಳಿಸಲು ಕ್ರಮ ಕೈಗೊಳ್ಳಲಾಗುವುದು, ಹಳೆಯ ಚಾಳಿ ಮುಂದುವರೆಸಿರುವುದರಿಂದ ಶಿಸ್ತು ಕ್ರಮ ಅನಿವಾರ್ಯವಾಗಿದೆ ಎಂದರು. ಪೋಷಕರು ಹಾಗೂ ವಿದ್ಯಾರ್ಥಿಗಳು ಅನುಚಿತ ವರ್ತನೆ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರಿಂದ ಪುರ ಪೊಲೀಸರು ಶಾಲೆಗೆ ಆಗಮಿಸಿ ಠಾಣೆಗೆ ಕರೆದೊಯ್ದರು. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin