ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆಯನ್ನು ಕೊಂಡ ಮಗ

ಈ ಸುದ್ದಿಯನ್ನು ಶೇರ್ ಮಾಡಿ

Murder

ತಿಪಟೂರು, ಆ.9- ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ನಡುವೆ ನಡೆದ ಜಗಳ ತಂದೆಯ ಹತ್ಯೆಯಲ್ಲಿ ಕೊನೆಗೊಂಡಿರುವ ಘಟನೆ ತಾಲೂಕಿನ ಹೊನ್ನವಳ್ಳಿಯಲ್ಲಿ ನಡೆದಿದೆ.  ಹೊನ್ನವಳ್ಳಿಯ ಬಳೆಗಾರ ಶೆಟ್ರು ವೆಂಕಟೇಶ್ (60) ಕೊಲೆಯಾದ ವ್ಯಕ್ತಿ. ಇವರಿಗೆ ಶ್ರೀನಿವಾಸ್(28) ಎಂಬ ಮಗನಿದ್ದು, ಈತ ತಿಪಟೂರಿನ ನೆಹರೂ ನಗರದಲ್ಲಿ ವಾಸವಿದ್ದು, ಕಳೆದ ಎರಡು-ಮೂರು ದಿನಗಳ ಹಿಂದೆ ಹೊನ್ನವಳ್ಳಿಯ ತಂದೆಯ ಮನೆಗೆ ಬಂದಿದ್ದರು.  ತಂದೆ ವೆಂಕಟೇಶ್, ಅವರ ಪತ್ನಿ ಹಾಗೂ ಮಗ ವೆಂಕಟೇಶ್ ಈ ಮೂವರೂ ಕುಡುಕರಾಗಿದ್ದು, ಇಂದು ಈ ಮೂವರೂ ಕುಡಿದಿದ್ದರು. ಕುಡಿದ ಅಮಲಿನಲ್ಲಿ ಈ ಮೂವರೂ ಮಾತನಾಡುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ ಎನ್ನಲಾಗಿದೆ.  ಇದರಿಂದ ರೊಚ್ಚಿಗೆದ್ದ ಶ್ರೀನಿವಾಸ ಮರದ ರಿಪೀಸಿನಿಂದ ವೆಂಕಟೇಶನ ತಲೆಗೆ ಒಡೆದಿದ್ದು, ಬಲವಾಗಿ ಏಟು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.   ಹೊನ್ನವಳ್ಳಿ ಠಾಣಾಧಿಕಾರಿ ಲಕ್ಷ್ಮೀಕಾಂತ್ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin