ಕುಡಿಯಲು ಯೋಗ್ಯವಾದ ನೀರಿದ್ದರೆ ಮಾತ್ರ ‘ಪಾತಾಳ ಗಂಗೆ’ ಕಾರ್ಯಕ್ರಮದ ಅನುಷ್ಠಾನ

ಈ ಸುದ್ದಿಯನ್ನು ಶೇರ್ ಮಾಡಿ

HK-Patil-Session

ಬೆಂಗಳೂರು, ಮೇ 13– ಕುಡಿಯಲು ಯೋಗ್ಯವಾದ ನೀರಿದೆ ಎಂಬ ಖಾತರಿಯಾದ ಬಳಿಕವಷ್ಟೇ ‘ಪಾತಾಳ ಗಂಗೆ’ಯಂತ ಕಾರ್ಯಕ್ರಮದ ತುರ್ತು ಅನುಷ್ಠಾನದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.  ಮಾಜಿ ಸಚಿವ ಸುರೇಶ್‍ಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಸಚಿವರು ಈ ವಿಷಯ ತಿಳಿಸಿದ್ದು, ಪಾವಗಡ ತಾಲ್ಲೂಕಿನಲ್ಲಿ ಯಾವುದೇ ನೀರಿನ ಮೂಲ ಇಲ್ಲದಿರುವ ಕಡೆಗಳಲ್ಲಿ 300ರಿಂದ 800ಮೀಟರ್ ವರೆಗೆ ದೊರಕುವ ಜಲ ಮೂಲವನ್ನು ಗುರುತಿಸಿ ಅನುಷ್ಠಾನಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ವಿಫಲ ವಿದೇಶಿ ಪ್ರಯತ್ನಗಳನ್ನು ಒಳಗೊಂಡಂತೆ ಎಲ್ಲಾ ಮಾಹಿತಿಯನ್ನು ಕ್ರೂಢೀಕರಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.ಭೂಮಿಯ ಒಳಭಾಗದಲ್ಲಿರುವ ನೀರನ್ನು ವಿಶೇಷ ತಂತ್ರಜ್ಞಾನದಿಂದ ಗುರುತಿಸಿ ಮೇಲೆತ್ತುವ ಯೋಜನೆಯನ್ನು ಸರ್ಕಾರ ಹಮ್ಮಿಕೊಳ್ಳಲು ಉದ್ದೇಶಿಸಿದೆ. ಪಾತಾಳಗಂಗೆ ಬಗ್ಗೆ ಕೆಲ ಜಲ ಹಾಗೂ ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅವರಿಗೂ ಕೂಡ ಲಭ್ಯವಿರುವ ವೈಜ್ಞಾನಿಕ ಹಾಗೂ ತಾಂತ್ರಿಕ ಮಾಹಿತಿಯ ವಿವರಗಳನ್ನು ಒದಗಿಸಿ ತಪ್ಪು ಕಲ್ಪನೆಯನ್ನು ದೂರ ಮಾಡುವ ಪ್ರಯತ್ನ ಮಾಡಲಾಗುವುದು.   ಸತತ ಬರಗಾಲ, ಕುಸಿದಿರುವ ಅಂತರ್ಜಲ, ಕುಡಿಯುವ ನೀರಿನ ಗಂಭೀರ ಸಮಸ್ಯೆಯಿಂದ ಆಪತ್ಕಾಲದಲ್ಲಿ ಜನರ ಬವಣೆ ನೀಗಿಸಲು ಸರ್ಕಾರ ಪಾತಾಳ ಗಂಗೆಯಂತಹ ಯೋಜನೆ ಕೈಗೊಳ್ಳಲು ಮುಂದಾಲೋಚನೆ ನಡೆಸಿದೆ.

ಕುಡಿಯುವ ನೀರಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಮಳೆಯೇ ಬಾರದಿದ್ದಾಗ ಜಲ ಮರುಪೂರಣ ಸಾಧ್ಯವಿಲ್ಲ. ಆದರೂ ನಿರಂತರವಾಗಿ ಅಂತರ್ಜಲ ಹೆಚ್ಚಿಸಲು ಜಲ ಮರುಪೂರಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin