ಕುಡಿಯುವ ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

chintamani
ಚಿಂತಾಮಣಿ,ಅ.24-ನಗರದ 14ನೇ ವಾರ್ಡಿನ ತಪತೇಶ್ವರ ಕಾಲೋನಿಯ ಜನತೆ ಕುಡಿಯುವ ನೀರಿಗೆ ಆಗ್ರಹಿಸಿ ಖಾಲಿ ಬಿಂದಿಗೆಗಳೊಂದಿಗೆ ಎಂ.ಜಿ. ರಸ್ತೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಪುರುಷರು ಮಹಿಳೆಯರು ಮತ್ತು ಮಕ್ಕಳು ಎಂ.ಜಿ. ಮುಖ್ಯ ರಸ್ತೆಯಲ್ಲಿ ಖಾಲಿ ಬಿಂದಿಗೆಗಳನ್ನು ಇಟ್ಟುಕೊಂಡು ರಸ್ತೆ ತಡೆ ನಡೆಸಿದ ಪರಿಣಾಮ ವಾಹನ ಸಂಚಾರ ಸ್ಥಗಿತ ಗೊಂಡು ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡಿದ ಘಟನೆ ನಡೆಯಿತು.  ಪ್ರತಿಭಟನೆ ನಡೆಸುತ್ತಿದ್ದ ವಿಷಯ ತಿಳಿದು ಸ್ಥಳಕ್ಕೆ ಅಗಮಿಸಿದ ನಗರಸಭೆಯ ನೀರು ಸರಬರಾಜು ಇಲಾಖೆಯ ಜೆ.ಇ ಗೌತಮ್ ರವರಿಗೆ ಜನರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನೀರಿನ ಸರಬರಾಜಿನಲ್ಲಿ ತಾರತಮ್ಯದ ಜೊತೆಗೆ ರಾಜಕೀಯ ಮಾಡುತ್ತಿರುವ ಬಗ್ಗೆ ಅಧಿಕಾರಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು ಕಳೆದ ಒಂದು ತಿಂಗಳಿನಿಂದ ನೀರು ಸರಿಯಾಗಿ ಬರುತ್ತಿಲ್ಲ ಎಂದಾಗ ನೀರು ಸರಬರಾಜು ಇಲಾಖೆಯ ಅಧಿಕಾರಿ ಗೌರಮ್ ಕಳೆದ ಒಂದು ತಿಂಗಳಿನಿಂದ ನೀರು ಬಾರದೆ ಇದ್ದರೆ ನಮ್ಮ ಗಮನಕ್ಕೆ ಏಕೆ ತರಲಿಲ್ಲ ವೆಂದು ಪ್ರಶ್ನಿಸಿದಾಗ ಪ್ರತಿಭಟನಾಕಾರರು ಅವರ ಪ್ರಶ್ನೆಗೆ ಉತ್ತರಿಸಲೇ ಇಲ್ಲ.

ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ವರದಿಗಾರರೊಂದಿಗೆ ಮಾತನಾಡಿದ ನಗರಸಭೆಯ ಅಧಿಕಾರಿಗಳು, ಕಳೆದರಡು ದಿನಗಳಿಂದ ವಿದ್ಯುತ್‍ನಲ್ಲಿ ಸಂಪೂರ್ಣ ಏರುಪೇರು ಆಗುತ್ತಿರುವ ಪರಿಣಾಮ ಕೊಳವೆಬಾವಿಗಳಿಂದ ನೀರು ಟ್ಯಾಂಕ್‍ಗಳಿಗೆ ತುಂಬಿಸಲಿಕ್ಕೆ ಆಗದೆ ಇರುವುದರಿಂದ ನೀರಿನ ಸಮಸ್ಯೆ ತಾತ್ಕಲಿಕವಾಗಿ ಸಮಸ್ಯೆ ಉದ್ಬವವಾಗಿದೆ ಹೊರತು ವಾಲ್ವ್‍ಮೆನ್‍ಗಳು ನೀರು ಸರಬರಾಜು ಸರಿದೂಗಿಸುವಲ್ಲಿ ವಿಫಲರಾಗಿಲ್ಲವೆಂದರು. ವಿದ್ಯುತ್ ಸಮಸ್ಯೆ ಸರಿಹೋದರೆ ಸಮಸ್ಯೆ ನೀಗಿಸುವುದಾಗಿ ಹೇಳಿದ ಅವರು ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮುಂದೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡು ತ್ತಲೇ ಇರುತ್ತೆ ಬೇಸಿಗೆ ಹೆಚ್ಚಾಗಿ ನೀರಿನ ಸಮಸ್ಯೆ ಮತ್ತಷ್ಟು ಸಮಸ್ಯೆಯಾಗಲಿದ್ದು ಅಕ್ಕೆ ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲು ಸಿದ್ದತೆ ಮಾಡಿಕೊಳ್ಳಬೇಕಾಗಿದೆ ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin