ಕುಡಿಯುವ ನೀರಿನ ಕೊರತೆ ನೀಗಿಸಲು ಜಲಾಶಯಗಳ ಡೆಡ್ ಸ್ಟೋರೇಜ್ ನೀರು ಬಳಸಲು ಸರ್ಕಾರ ಚಿಂತನೆ
ಬೆಂಗಳೂರು,ಫೆ.21- ನಗರಕ್ಕೆ ಕುಡಿಯುವ ನೀರು ಪೂರೈಸಲು 2ರಿಂದ 3 ಟಿಎಂಸಿ ಅಡಿಯಷ್ಟು ಕೊರತೆಯುಂಟಾಗಿದ್ದು , ಇದನ್ನು ನೀಗಿಸಲು ಜಲಾಶಯಗಳ ಡೆಡ್ ಸ್ಟೋರೇಜ್ ನೀರನ್ನು ಬಳಸಲು ಚಿಂತನೆ ನಡೆಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ನೀರಿನ ಕೊರತೆ ಉಂಟಾಗುವ ವಿಚಾರವನ್ನು ಬೆಂಗಳೂರು ಜಲಮಂಡಳಿಯ ಗಮನಕ್ಕೆ ತರಲಾಗಿದ್ದು , ನೀರಿನ ಮಿತ ಬಳಕೆಗೆ ಕೋರಲಾಗಿದೆ ಎಂದರು.
ಕೃಷ್ಣರಾಜ ಸಾಗರ ಹಾಗೂ ಕಬಿನಿ ಜಲಾಶಯಗಳ ಡೆಡ್ ಸ್ಟೋರೇಜ್ ನೀರನ್ನು ಹೆಚ್ಚುವರಿಯಾಗಿ ಬೆಂಗಳೂರಿಗೆ ಬಳಸಲು ಚಿಂತನೆ ನಡೆಸಲಾಗಿದ್ದು , 40 ಕೋಟಿ ರೂ. ವೆಚ್ಚವಾಗಲಿದೆ. ಈ ನೀರನ್ನು ಬಳಸಲು ನೀರು ಎತ್ತಬೇಕಾದ ಅಗತ್ಯವಿದೆ. ಸುಮಾರು 5 ಟಿಎಂಸಿವರೆಗೂ ಡೆಡ್ ಸ್ಟೋರೇಜ್ ನೀರು ಸಿಗಬಹುದು. ಇದರಿಂದ ನೀರಿನಲ್ಲಿ ವಾಸಿಸುವ ಜಲಚರಗಳಿಗೆ ತೊಂದರೆಯಾಗಲಿದೆ. ಅದನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಸದ್ಯ ನೀರಾವರಿಗೆ ಕೃಷಿಗೆ ನೀರನ್ನು ನಿಲ್ಲಿಸಿರುವುದರಿಂದ ಈಗಿರುವ ಸಂಗ್ರಹದಲ್ಲಿ ಮೇ ತಿಂಗಳವರೆಗೂ ಮೇ ತಿಂಗಳವರೆಗೂ ನೀರಿನ ತೊಂದರೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS