ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ‘ಭದ್ರಾ’ ಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

kaduru

ಕಡೂರು, ಫೆ.16- ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸುಮಾರು 40 ಲಕ್ಷ ರೂ.ಗಳ ವೆಚ್ಚದಲ್ಲಿ 5, 7 ಹಾಗೂ 8ನೇ ವಾರ್ಡಿಗೆ ಭದ್ರಾ ಕುಡಿಯುವ ನೀರು ಯೋಜನೆಯಿಂದ ಪೈಪ್‍ಲೈನ್ ಅಳವಡಿಕೆ ಕಾಮಗಾರಿ ಅತ್ಯಂತ ವೇಗದಲ್ಲಿ ನಡೆಯುತ್ತಿದೆ ಎಂದು ಪುರಸಭೆ ಅಧ್ಯಕ್ಷ ಎಂ. ಮಾದಪ್ಪ ತಿಳಿಸಿದರು. ದೇವರಾಜು ಅರಸ್ ರಸ್ತೆಯಲ್ಲಿ ಭದ್ರಾ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ವೀಕ್ಷಿಸಿ ಪತ್ರಿಕೆಯೊಂದಿಗೆ ಮಾತನಾಡಿ, ಈಗಾಗಲೇ ಬಹಳಷ್ಟು ವಾರ್ಡುಗಳಿಗೆ ಭದ್ರಾ ನೀರನ್ನು ನೀಡಲಾಗುತ್ತಿದೆ. ಆದಷ್ಟು ಬೇಗ 5, 7 ಹಾಗೂ 8ನೇ ವಾರ್ಡ್‍ಗಳಿಗೆ ನೀಡುವ ಉದ್ದೇಶದಿಂದ ಕಾಮಗಾರಿಯನ್ನು ತ್ವರಿತವಾಗಿ ನಡೆಸಲಾಗುತ್ತಿದೆ. ಬಿರು ಬೇಸಿಗೆಯಿದ್ದರೂ ಬರಗಾಲದಿಂದ ತತ್ತರಿಸಿದ್ದರೂ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದ ರೀತಿಯಲ್ಲಿ ಸಮರ್ಪಕವಾಗಿ ಇಡೀ ಪಟ್ಟಣಕ್ಕೆ ನೀರು ನೀಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 5 ನದಿಗಳು ಹುಟ್ಟಿದರೂ ಸಹ ಮಲೆನಾಡು ಭಾಗದಲ್ಲೇ ಕುಡಿಯುವ ನೀರಿಗೆ ತೊಂದರೆಯಾಗಿದೆ. ಆದರೆ ಕಡೂರು ಸಾರ್ವಜನಿಕರಿಗೆ ಕುಡಿಯುವ ನೀರಿನ ಬೆಲೆ ತಿಳಿಯಬೇಕಿದೆ. ಕೆಲವು ವಾರ್ಡುಗಳಲ್ಲಿ ನೀರನ್ನು ಪೋಲು ಮಾಡುತ್ತಿದ್ದು, ಇನ್ನೂ ಕೆಲವು ಭಾಗಗಳಲ್ಲಿ ತಮ್ಮ ನೀರಿನ ತೊಟ್ಟಿ ತುಂಬಿದ್ದರೂ ರಸ್ತೆಗಳಲ್ಲಿ ಹರಿದು ಹೋಗುತ್ತಿರುವ ನಿದರ್ಶನಗಳಿವೆ. ನೀರನ್ನು ಮಿತವಾಗಿ ಬಳಸುವವಂತೆ ಸಲಹೆ ಮಾಡಿದರು.ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಬಷೀರ್‍ಸಾಬ್, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಖಾದರ್ ಮುಂತಾದವರು ಕಾಮಗಾರಿ ವೀಕ್ಷಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin