ಕುಡಿಯುವ ನೀರು ಸರಬರಾಜು ಕಾಮಗಾರಿಯಲ್ಲಿ ಅಕ್ರಮ : ಸಿಎಜಿ ವರದಿಯಿಂದ ಬಹಿರಂಗ

ಈ ಸುದ್ದಿಯನ್ನು ಶೇರ್ ಮಾಡಿ

Drinking-Water--01

ಬೆಂಗಳೂರು, ಜೂ.7– ತಾಲ್ಲೂಕು ವಾರು ಕುಡಿಯುವ ನೀರು ಸರಬರಾಜು ಕಾಮಗಾರಿ ಅನುಷ್ಠಾನಕ್ಕಾಗಿ ಕೈಗೊಳ್ಳುವ ಕಾಮಗಾರಿಗಳ ಟೆಂಡರ್ ಕರೆಯುವಲ್ಲಿ ಅಕ್ರಮ ನಡೆದಿದೆ ಎಂದು ಸಿಎಜಿ ವರದಿ ನೀಡಿದೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನದಲ್ಲಿ 2016ರ ಏಪ್ರಿಲ್ ಮತ್ತು ಸೆಪ್ಟೆಂಬರ್
ನಡುವೆ ವರದಿ ಸಿದ್ದಪಡಿಸಲಾಗಿದ್ದು, ಆ ಪ್ರಕಾರ ಗ್ರಾಮೀಣ ಭಾಗಗಳಲ್ಲಿ ನೀರಿನ ಪ್ರಯೋಗಾಲಯ ಸ್ಥಾಪಿಸುವಲ್ಲಿ ಕರೆಯಲಾಗಿರುವ ಟೆಂಡರ್‍ನಲ್ಲೂ ಅಕ್ರಮ ನಡೆದಿದೆ. 76 ತಾಲ್ಲೂಕುಗಳಲ್ಲಿ ಪ್ರಯೋಗಾಲಯಗಳೇ ಇಲ್ಲ.ಬ್ಯಾಕ್ಟೀರಿಯಾ ಹಾಗೂ ರಾಸಾಯನಿಕಗಳ ಪರೀಕ್ಷೆ ಮಾಡಲಾಗುತ್ತಿಲ್ಲ. ಇದರಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದಿದ್ದು, 2012ರಿಂದ 2016ರವರೆಗೆ ರಾಜ್ಯದ 9519 ನೀರು ಶುದ್ಧೀಕರಣ ಘಟಕಗಳ ಸ್ಥಾಪನೆ ಮಾಡಬೇಕಾಗಿತ್ತಾದರೂ ಕೇವಲ 5941 ಘಟಕಗಳನ್ನು ಮಾತ್ರ ತೆರೆಯಲಾಗಿದೆ. ಇದರಿಂದ ಶೇ. 62ರಷ್ಟು ಮಾತ್ರ ನೀರು ಶುದ್ದೀಕರಣ ಕಾರ್ಯ ನಡೆದಿದೆ ಎಂದು ತಿಳಿಸಿದೆ. ಈ ಅವಧಿಯಲ್ಲಿ ನೀರು ಪೂರೈಕೆ ಕಾಮಗಾರಿಗಳಿಗೆ ಕೇಂದ್ರದಿಂದ ನೀಡಲಾದ ಅನುದಾನದಲ್ಲಿ 65.68 ಕೋಟಿ ರೂ. ಬಳಕೆಯಾಗದೆ ಕೇಂದ್ರಕ್ಕೆ ವಾಪಸಾಗಿದೆ. ಇದರಿಂದ ಈ ಯೋಜನೆಯ ಹಣಕಾಸು ನಿರ್ವಹಣಾ ದುರ್ಬಲತೆ ಎದ್ದು ಕಾಣುತ್ತಿದೆ ಎಂದು ವರದಿ ನೀಡಲಾಗಿದೆ.

106 ಅನಧಿಕೃತ ಖಾತೆಗಳಲ್ಲಿ ವಿವಿಧ ಬ್ಯಾಂಕ್‍ಗಳಲ್ಲಿ ಹಣ ಇಟ್ಟಿರುವುದು ಸಹ ಗೊಂದಲಮಯ ವಾತಾವರಣ ನಿರ್ಮಿಸಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಗಂಭೀರ ಲೋಪ ಉಂಟಾಗಿದ್ದು, ಕೇಂದ್ರ ಸರ್ಕಾರಕ್ಕೆ ಅಂಕಿ-ಅಂಶ ಸಲ್ಲಿಸುವಲ್ಲಿಯೂ ಹೆಚ್ಚಿನ ಲೋಪ ಕಾಣುತ್ತಿದೆ.   ಸಿಂಡಿಕೇಟ್ ಬ್ಯಾಂಕ್‍ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ಇದೀಗ 237 ಕೋಟಿ ರೂ. ಬಡ್ಡಿ ಪಾವತಿಸುವಂತಾಗಿದ್ದು, ಜಿಲ್ಲಾ ಪಂಚಾಯ್ತಿಗಳು 41.63 ಕೋಟಿ ರೂ.ಗಳನ್ನು ತಮ್ಮಲ್ಲೇ ಉಳಿಸಿಕೊಂಡಿವೆ. ಇಂತಹ ಹಲವಾರು ಲೋಪದೋಷಗಳು ಕಂಡು ಬಂದಿರುವ ಬಗ್ಗೆ ಸಿಎಜಿ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ದಕ್ಷಿಣ ಕನ್ನಡ ಹಾಗೂ ಕೋಲಾರ ಜಿಪಂನಲ್ಲಿ ವಾಸ್ತವಾಂಶವನ್ನು ಮರೆಮಾಚಿ ಮೇಲಾಧಿಕಾರಿಗಳಿಗೆ ತಪ್ಪು ಲೆಕ್ಕ ತೋರಿಸಿದ್ದಾರೆ. ಅನಗತ್ಯವಾಗಿ 3 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮಳೆ ಕೊಯ್ಲು ಕಾಮಗಾರಿಯಲ್ಲೂ ಲೋಪವಾಗಿದ್ದು, ನಡೆಯಬೇಕಿದ್ದ 99 ಕಾಮಗಾರಿಗಳಲ್ಲಿ ಕೇವಲ 10 ಕಾಮಗಾರಿಗಳು ಮಾತ್ರ ಅನುಷ್ಠಾನಕ್ಕೆ ಬಂದಿದೆ.  ಗ್ರಾಮೀಣ ಭಾಗದ ಜನರಿಗೆ ಪ್ರತಿ ದಿನ 55 ಲೀಟರ್ ಹಣ ಕೊಡುವ ಸರ್ಕಾರದ ಗುರಿ ಶೇ.14 ಜನರಿಗೆ ಮಾತ್ರ ತಲುಪಿದ್ದು, ಅವರಿಗೆ ಮಾತ್ರ ನೀರೊದಗಿಸುವ ಕಾರ್ಯ ನಡೆಯುತ್ತಿದೆ. 2್ಡ47 ಯೋಜನೆ ವಿಫಲವಾಗಿದ್ದು, ನೀರು ಹಾಗೂ ಭೂಮಿಯ ಲಭ್ಯತೆ ಖಚಿತ ಪಡಿಸಿಕೊಳ್ಳದೆ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದರಿಂದ 7 ಯೋಜನೆಗಳು ಅಪೂರ್ಣವಾಗಿವೆ. ಹಾವೇರಿ ಜಿಲ್ಲೆಯ ಕುಡ್ಲಾ ಯೋಜನೆ ಕೆಲಸ ನಡೆಯದೆ ತಟಸ್ಥವಾಗಿದೆ. ಇದರಿಂದ ಮೂರು ಕೋಟಿ ನಿಷ್ಫಲವಾಗಿದೆ ಎಂದು ವಿವರಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin