ಕುಡುಕ ಸವಾರರಿಗೆ ನಿನ್ನೆ ಸಂಜೆಯೇ ಶಾಕ್ ಕೊಟ್ಟ ಪೋಲಿಸರು..!

ಈ ಸುದ್ದಿಯನ್ನು ಶೇರ್ ಮಾಡಿ

Drink-And--01
ಹೊಸ ವರ್ಷವನ್ನು ಬರಮಾಡಿಕೊಳ್ಳಲು ತಡರಾತ್ರಿಯವರೆಗೂ ಕಾಯಲಾಗದವರು ಸಂಜೆಯ ವೇಳೆಗೆ ಮದ್ಯಪಾನ ಪಾರ್ಟಿಮಾಡಿ ಬೇಗ ಮನೆಗೆ ಹೊಗುತ್ತಿದ್ದವರಿಗೆ ಸಂಚಾರ ಪೊಲಿಸರು ಸಂಜೆಯೇ ಕಾರ್ಯಚರಣೆಗೆ ಇಳಿಯುವ ಮೂಲಕ ಡ್ರಿಂಕ್ ಅಂಡ್ ಡ್ರೈವರ್ಸ್‍ಗೆ ಶಾಕ್ ನೀಡಿದರು.

ಈ ಬಾರಿ ಹೊಸ ವರ್ಷ ಸೋಮವಾರ ಬಂದಿದ್ದು, ಹಿಂದಿನ ದಿನ ಭಾನುವಾರ ರಜಾ ಇದ್ದಿದ್ದರಿಂದ ಸಂಭ್ರಮದ ನೆಪದಲ್ಲಿ ದಿನ ಪೂರ್ತಿ ಪಾರ್ಟಿ ಮಾಡುವವರಿಗೆ ಸಂತಸ ತಂದಿತ್ತು. ಇದೇ ಕಾರಣಕ್ಕೆ ಬೇಗ ಪಾರ್ಟಿ ಮುಗಿಸಿ, ತಡರಾತ್ರಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣಾ ಕಾರ್ಯಾಚರಣೆಗೆ ಪೋಲಿಸರು ಬರುವ ಮುನ್ನ ಮನೆಗೆ ಹೋಗೋಣ ಎಂದು ಪಾರ್ಟಿ ಮುಗಿಸಿ ಹೊರಟವರಿಗೆ ಸಂಜೆ 7:30ರ ವೇಳೆಗೆ ಪ್ರಮುಖ ರಸ್ತೆಗಳಲ್ಲಿ ಪ್ರತ್ಯಕ್ಷರಾದರು. ಮದ್ಯಪಾನ ಮಾಡಿದ್ದ ಕೆಲವು ಸವಾರರು ಪೊಲೀಸರ ಕೈಗೆ ಸಿಕ್ಕಿ ಬಿದ್ದು ದಂಡ ಪಾವತಿಸಿದರೆ, ಇನ್ನೂ ಕೆಲ ಸವಾರರು ದೂರದಿಂದಲೇ ಪೋಲಿಸರನ್ನು ಕಂಡು ಬಂದ ದಾರಿಯಲ್ಲಿ ವಾಪಸ್ಸು ಬರುತ್ತಿದ್ದದ್ದು ಕಂಡು ಬಂತು. ಇದು ಸರಿದಾರಿಯಲ್ಲಿ ಬರುತ್ತಿದ್ದ ಸವಾರರಿಗೆ ಹೆಚ್ಚು ಕಿರಿಕಿರಿ ಉಂಟಾಯಿತು.

ನಿನ್ನೆ ರಜಾ ಇದ್ದದ್ದರಿಂದ ಸಾಮಾನ್ಯವಾಗಿ ರಸ್ತೆಗಳಲ್ಲಿ ಸಂಚಾರ ದಟ್ಟನೆ ತೀರ ವಿರಳವಾಗಿತ್ತು. ಆದರೆ ಪೋಲಿಸರು ಕಾರ್ಯಾಚರಣೆಯಿಂದ ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗಿದ್ದದ್ದು ಸಾಮಾನ್ಯವಾಗಿತ್ತು. ಹೊರ ರಾಜ್ಯದವರೆ ಹೆಚ್ಚಿರುವ ಸರ್ಜಾಪುರ ರಸ್ತೆ ಸೇರಿದಂತೆ ನಗರದ ವಿವಿದೆಡೆ ಪೊಲೀಸರ ತಪಾಸಣಾ ಕಾರ್ಯಾ ಜೋರಾಗಿತ್ತು.

Facebook Comments

Sri Raghav

Admin