ಕುಣಿಗಲ್‍ನಲ್ಲಿ ದೊರೆತ ಶಿಲಾಶಾಸನ ವಿಜಯನಗರ ಅರಸರ ಕಾಲದ್ದು

ಈ ಸುದ್ದಿಯನ್ನು ಶೇರ್ ಮಾಡಿ

adsgSGDGಕುಣಿಗಲ್, ಆ.9– ಪೆಟ್ರೋಲ್‍ಬಂಕ್ ತೆರವುಗೊಳಿಸುವ ವೇಳೆ ದೊರೆತ ಶಿಲಾಶಾಸನ ವಿಜಯನಗರ ಅರಸರ ಕಾಲದ್ದು ಎಂದು ಇತಿಹಾಸ ತಜ್ಞ ರಾಜೇಶ್ ತಿಳಿಸಿದ್ದಾರೆ. ಪಟ್ಟಣದ ಎನ್.ಹುಚ್ಚಮಾಸ್ತಿಗೌಡ ವೃತ್ತದ ಬಳಿ ಇದ್ದ ಪುರಸಭೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಪೆಟ್ರೋಲ್ ಬ್ಯಾಂಕ್ ತೆರವು ವೇಳೆ ಮಾಸ್ತಿಗಲ್ ರೂಪದಲ್ಲಿದ್ದ ವಿಗ್ರಹವೊಂದು ದೊರಕಿತ್ತು. ಅದರಲ್ಲಿ ನಾಯಿ, ಸೂರ್ಯ, ಆಂಜನೇಯ ಹಾಗೂ ಹಳೆಕನ್ನಡ ಲಿಪಿಯುಳ್ಳ ಅಕ್ಷರಗಳಿದ್ದವು. ತಾಲೂಕು ಆಡಳಿತ ಇದನ್ನು ವಶಪಡಿಸಿಕೊಂಡಿತ್ತು.  ಇದರ ಬಗ್ಗೆ ಯಾವುದೇ ಕುರುಹು ದೊರಕಿರಲಿಲ್ಲ. ಈ ವೇಳೆ ಇತಿಹಾಸ ತಜ್ಞ ರಾಜೇಶ್ ಪರಿಶೀಲನೆ ನಡೆಸಿ ಇದೊಂದು ವಿಜಯನಗರ ಅರಸರ ಕಾಲದಲ್ಲಿದ್ದ ಮಹಾಮಂಡಲೇಶ್ವರರ ಹೆಸರಿದ್ದು, ಕುಣಿಗಲ್ ಪ್ರದೇಶವನ್ನು ದಾನವಾಗಿ ಬರೆದಿರುವ ಉಲ್ಲೇಖವಿದೆ. ಆದ್ದರಿಂದ ಇನ್ನೂ ಹೆಚ್ಚಿನ ಮಾಹಿತಿ ಸಂಶೋಧನೆ ನಂತರ ತಿಳಿಯಲಿದೆ ಎಂದು ತಿಳಿಸಿದ್ದಾರೆ.
ಕುಣಿಗಲ್‍ನಲ್ಲಿ ಹೊಯ್ಸಳರು, ಚೋಳರು, ವಿಜಯನಗರ ಅರಸರು ಆಳ್ವಿಕೆ ನಡೆಸಿದ್ದು, ಪಟ್ಟಣದ ಸಂತೆ ಮೈದಾನ ಕೋಟೆ ಪ್ರದೇಸ, ದೊಡ್ಡಕೆರೆ ಭಾಗಗಳಲ್ಲಿ ಗರಡಿ ಶಾಲೆಗಳು, ಸುರಂಗ ಮಾರ್ಗಗಳು ಮತ್ತು ಇತರೆ ವಿಶೇಷ ವಿಗ್ರಹಗಳು ಈಗಲೂ ಇವೆ.

Facebook Comments

Sri Raghav

Admin