ಕುಣಿಗಲ್‍ನಲ್ಲಿ ಶಿಲಾ ಶಾಸನ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

adsgSGDG

ಕುಣಿಗಲ್, ಆ.6- ರಾಷ್ಟ್ರೀಯ ಹೆದ್ದಾರಿ ಯಲ್ಲಿನ ಹಳೆಯ ಕಟ್ಟಡವೊಂದನ್ನು ತೆರವು ಗೊಳಿಸುವ ವೇಳೆ ಶಿಲಾಶಾಸನವೊಂದು ಪತ್ತೆಯಾಗಿದೆ. ಪಟ್ಟಣದ ಹೃದಯ ಭಾಗದ ಎನ್. ಹುಚ್ಚಮಾಸ್ತಿಗೌಡ ವೃತ್ತದ ಪಕ್ಕದಲ್ಲಿರುವ ಹಳೆಯ ಪೆಟ್ರೋಲ್‍ಬಂಕ್‍ನ್ನು ಪುರಸಭೆಯವರು ತೆರವುಗೊಳಿಸುತ್ತಿದ್ದ ವೇಳೆ  ಶಿಲಾಶಾಸನ ದೊರೆತಿದೆ. ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ಬಲಭಾಗದಲ್ಲಿ ಇದ್ದ ಪ್ರಬಾತ್ ಪೆಟ್ರೋಲ್‍ಬಂಕನ್ನು ಇಂದು ಬೆಳಗ್ಗೆ ತೆರವುಗೊಳಿಸುತ್ತಿದ್ದಾಗ ಶಾಸನ ಪತ್ತೆಯಾಗಿದ್ದು, ಇದನ್ನು ಕಂಡ ಸ್ಥಳೀಯರು ಉದ್ಭವ ಆಂಜನೇಯವೆಂದು ಕಲ್ಲಿಗೆ ಅರಿಶಿಣ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ರಮೇಶ್, ಸಿಪಿಐ ಬಾಳೇಗೌಡ, ಪಿಎಸ್‍ಐ ಕೇಶವಮೂರ್ತಿ, ಅದನ್ನು ಪರಿಶೀಲಿಸಿ ವಶಕ್ಕೆ ಪಡೆದಿದ್ದು, ತಾಲ್ಲೂಕು ಕಚೇರಿಯಲ್ಲಿ ಇರಿಸಿದ್ದಾರೆ. ಈ ಶಾಸನ ಮಾಸ್ತಿ ಅಥವಾ ವೀರಗಲ್ಲು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಇದರ ಮೇಲೆ ಸೂರ್ಯ, ಚಂದ್ರ, ನಾಯಿ, ಆಂಜನೇಯ ಚಿತ್ರಗಳನ್ನು ಕೆತ್ತಲಾಗಿದೆ. ಅಲ್ಲದೆ, ಹಳೇಗನ್ನಡದ ಬರಹವೂ ಇದರಲ್ಲಿದ್ದು, ಇದೇನು ಎಂಬುದನ್ನು ತಿಳಿದು ಕೊಳ್ಳಲು ಇದರ ಪರಿಶೀಲನೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ   ಪ್ರಾಚ್ಯವಸ್ತು ಸಂಗ್ರಹಾಲಯಕ್ಕೂ ವಿಷಯ ಮುಟ್ಟಿಸಲಾಗಿದೆ.

Facebook Comments

Sri Raghav

Admin