ಕುತೂಹಲ ಕೆರಳಿಸುತ್ತಿದೆ *121#’ ಚಿತ್ರದ ಟ್ರೇಲರ್

ಈ ಸುದ್ದಿಯನ್ನು ಶೇರ್ ಮಾಡಿ

ಥ್ರಿಲ್ಲರ್‌ ಸಿನಿಮಾಗಳ ಸಾಲಿಗೆ ಈಗ ಮತ್ತೂಂದು ಸಿನಿಮಾ ಸೇರ್ಪಡೆಯಾಗುತ್ತಿದೆ. ಅದು “*121#’. ವಿಭಿನ್ನ ಟೈಟಲ್ನೊಂದಿಗೆ ಚಿತ್ರ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯಕ್ಕೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸುತ್ತಿದೆ. ಈ ಚಿತ್ರವನ್ನು ದೋಸ್ತಿ ವಿ ಆನಂದ್‌ ನಿರ್ದೇಶಿಸಿದ್ದಾರೆ. ಸಾವಿನ ಮನೆಯಲ್ಲಿ ಕೇಕೆ ಹಾಕಿ ನಗುತ್ತಿರುವ ಕರಾಳ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆಯಂತೆ.  ಚಿತ್ರದ ಟೈಟಲ್‌ ಕೇಳಿದಾಗ ನಿಮಗೆ ಮೊಬೈಲ್‌ ರೀಚಾರ್ಜ್‌ ಕೋಡ್‌ ನೆನಪಾಗಬಹುದು. ಆದರೆ, ಖಂಡಿತಾ ಮೊಬೈಲ್‌ಗ‌ೂ ಈ ಸಿನಿಮಾಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ ನಿರ್ದೇಶಕ ವಿ ಆನಂದ್‌ . ನಾಲ್ಕು ಜನ ಫ್ರೆಂಡ್ಸ್‌ ಒಂದು ಕ್ರೈಂ ಮಾಡಿದ ನಂತರ ಸುಳ್ಳಿನ ಅರಮನೆ ಕಟ್ಟುತ್ತಾರೆ. ಆ ನಂತರ ಅದರಿಂದ ಹೊರಗೆ ಬರ್ತಾರ ಅಥವಾ ಅದರೊಳಗೆ ಸಿಕ್ಕಿಕೊಳ್ಳುತ್ತಾರಾ ಎಂಬ ಲೈನ್‌ನೊಂದಿಗೆ ಇಡೀ ಸಿನಿಮಾ ಸಾಗುತ್ತದೆಯಂತೆ. ಈ ಚಿತ್ರವನ್ನು ಕಿರಣ್‌ ಕುಮಾರ್‌ ಹಾಗೂ ರಾಧಾಕೃಷ್ಣಾಚಾರಿ ನಿರ್ಮಿಸಿದ್ದಾರೆ.
ಚಿತ್ರಕ್ಕೆ ಕಾರ್ತಿಕ್‌ ಮಲ್ಲೂರ್‌ ಛಾಯಾಗ್ರಹಣ, ರಾಘವೇಂದ್ರ ಹಾಗೂ ಅರವಿಂದ್‌ ಜಾಧವ್‌ ಅವರ ಸಂಗೀತವಿದೆ.

movie

Facebook Comments

Sri Raghav

Admin