ಕುತೂಹಲ ಘಟ್ಟ ತಲುಪಿದ ಎರಡನೇಯ ಟೆಸ್ಟ್
ಕೋಲ್ಕತ್ತಾ, ಅ.3– ಆತಿಥೇಯ ನೀಡಿದ 374 ರನ್ಗಳ ಸವಾಲಿನ ಮೊತ್ತ ಬೆನ್ನಟ್ಟಿ ಹೊರಟ್ಟ ಪ್ರವಾಸಿ ತಂಡ ಉತ್ತಮ ಆರಂಭ ಪಡೆದಿದೆ. ಇತ್ತ ಭಾರತೀಯ ಬೌಲರ್ಗಳು ತೀವ್ರ ಪ್ರತಿರೋಧ ನಡೆಸುತ್ತಿದೆ. ಹೀಗಾಗಿ ಎರಡನೇಯ ಟೆಸ್ಟ್ ಪಂದ್ಯವು ಕುತೂಹಲ ಘಟ್ಟ ತಲುಪಿದೆ. ಐತಿಹಾಸಿಕ ಕ್ರಿಕೆಟ್ ಕಾಶಿ ಈಡಾನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಕೊಹ್ಲಿ ಬಳಗ ಕಳಫೆ ಬ್ಯಾಟಿಂಗ್ ಪ್ರದರ್ಶಿಸಿ ಎರಡನೇ ಇನಿಂಗ್ಸ್ನಲ್ಲಿ 263 ರನ್ನಿಗೆ ಆಲೌಟ್ ಆಗುವ ಮೂಲಕ 376 ರನ್ಗಳನ್ನು ಕಿವೀಸ್ಗೆ ಗುರಿ ನೀಡಿದೆ. ನಿನ್ನೆ 227 ರನ್ನಿಗೆ 8 ವಿಕೆಟ್ ಕಳೆದುಕೊಂಡು ದಿನದಾಟ ಆರಂಭಿಸಿದ ಟೀಂ ಇಂಡಿಯಾ 36 ರನ್ಗನ್ನು ಸೇರಿಸಿ ಕೊನೆಯ ಎರಡು ವಿಕೆಟ್ಕೊಳೆದುಕೊಂಡಿತ್ತು. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅಜೇಯ 37 ರನ್ಗಳಿಸಿದ್ದ ಅವರು ಇಂದು ಅರ್ಧಶತಕ ದಾಖಲಿಸಿದರು. ಭುವನೇಶ್ವರ್ 23 ಹಾಗೂ ಶೆಮಿ 1ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಆತಿಥೇಯರು 236 ರನ್ಗಳಿಗೆ ಆಲೌಟ್ ಆಗಿ ಕಿವೀಸ್ಗೆ 374 ರನ್ ಗುರಿ ನೀಡಿತು.
ಉತ್ತಮ ಆರಂಭ ಪಡೆದ ಕಿವೀಸ್:
374ರನ್ಗಳ ಗುರಿ ಪಡೆದ ಕಿವೀಸ್ 2ನೇ ಇನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದಿದೆ. ಆರಂಭಿಕ ಆಟಗಾರರಾದ ಟಾಮ್ ಲಾಥಮ್ ಹಾಗೂ ವಾರ್ಟಿನ್ ಗುಪ್ಟಿಲ್ ಜೋಡಿಯೂ ಮೊದಲ ವಿಕೆಟ್ ಜೊತೆಯಾಟದಲ್ಲಿ 55ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ತಂಡದ ಮೊತ್ತ 55ರನ್ ಆಗಿದ್ದಾಗ ಈ ಜೋಡಿಯೂ ಬೇರ್ಪಟ್ಟಿತ್ತು. ನಿಧಾನವಾಗಿ ಬ್ಯಾಟಿಂಗ್ ಆಡುತ್ತಿದ್ದ ಮಾರ್ಟಿನ್ ಗುಪ್ಟಿಲ್ 24 ರನ್ ಗಳಿಸಿದ್ದಾಗ ಆರ್.ಆಶ್ವಿನ್ ಬೌಲಿಂಗ್ ನಲ್ಲಿ ಔಟ್ ಆದರು. ಒಂದು ಕಡೆ ಕ್ರೀಸ್ಗೆ ನಲೆಯೂರಿ ಆಡುತ್ತಿರುವ ಟಾಮ್ ಲಾಥ್ಮ್ ಆಜೇಯ 35 ರನ್ ಗಳಿಸಿ ಭಾರತೀಯ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಒನ್ ಡೌನ್ ಬ್ಯಾಟ್ಸ್ಮನ್ ನಿಕೋಲಸ್ ಆಜೇಯ 13 ರನ್ ಗಳಿಸಿ ಕ್ರೀಸ್ನಲ್ಲಿದ್ದರು.
ವಿರಾಮದ ವೇಳೆಗೆ ಕಿವೀಸ್ 1 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿ ಗುರಿಯತ್ತ ಸಾಗಿದೆ. ಮೂರು ದಿನಗಳಿಂದ ಬೌಲರ್ಗಳಿಗೆ ನೆರವಾಗುತ್ತಿರುವ ಪಿಚ್ ಬ್ಯಾಟ್ಸ್ಮನ್ಗಳಿಗೆ ಸಹಾಯವಾಗುತ್ತಿದ್ದು ಇದನ್ನೇ ಸದುಪಯೋಗಪಡಿಸಿಕೊಂಡ ಕಿವೀಸ್ ಆರಂಭಿಕರು ಭಾರತೀಯ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಇತ್ತ ಆತಿಥೇಯ ಬೌಲರ್ಗಳು ಕಿವೀಸ್ ಬ್ಯಾಟ್ಸ್ಮನ್ಗಳು ಪ್ರತಿರೋಧ ನೀಡುತ್ತಿದ್ದಾರೆ. ಆದರೆ ಅದೃಷ್ಟ ಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದನ್ನು ಕಾದುನೋಡಬೇಕಿದೆ.
► Follow us on – Facebook / Twitter / Google+