ಕುದುರೆಗಳ ಕಳ್ಳಸಾಗಾಣೆ

ಈ ಸುದ್ದಿಯನ್ನು ಶೇರ್ ಮಾಡಿ

caballo
ಕೊಪ್ಪಳ,ಸೆ.22-ಹೈದರಾಬಾದ್‍ಗೆ ಕುದುರೆಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಜಾಲವೊಂದು ಇಲ್ಲಿ ಪತ್ತೆಯಾಗಿದೆ. ಕಂಟೈನರ್ ಲಾರಿಯೊಂದರಲ್ಲಿ 27 ಕುದುರೆಗಳನ್ನು ಕೊಪ್ಪಳದಿಂದ ಹೈದರಾಬಾದ್‍ಗೆ ಕಳ್ಳಸಾಗಾಣೆ ಮಾಡಲಾಗುತ್ತಿತ್ತು. ಇವುಗಳನ್ನು ವಿವಿಧೆಡೆ ಕಳ್ಳತನ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಅನುಮಾನದ ಮೇರೆಗೆ ಕುರಿಕಾರರು ಹಾಗೂ ಸ್ಥಳೀಯರು ಹೊಸಪೇಟೆ ರಸ್ತೆಯ ಪೆಟ್ರೋಲ್ ಬಂಕ್‍ವೊಂದರ ಬಳಿ ಲಾರಿಯನ್ನು ತಡೆದು ಪರಿಶೀಲಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಪ್ಪಳ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin