ಕುದುರೆಯಿಂದ ಬಿದ್ದು ಸೇನಾ ಮೇಜರ್ ಸಾವು
ಜಮ್ಮು, ಜೂ.8-ಮಾತಾ ವೈಷ್ಣೋದೇವಿ ಗುಹಾಂತರ ದೇವಾಲಯಕ್ಕೆ ತೆರಳುತ್ತಿದ್ದ ಮೇಜರ್ ಶ್ರೇಣಿಯ ಸೇನಾಧಿಕಾರಿಯೊಬ್ಬರು ಕುದುರೆಯಿಂದ ಬಿದ್ದು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆ ತ್ರಿಕೂಟ ಪರ್ವತದಲ್ಲಿ ಸಂಭವಿಸಿದೆ. ಮೇಜರ್ ಪ್ರದೀಪ್ ಸಿಂಗ್ ಗುಹಾಂತರ ದೇವಾಲಯಕ್ಕೆ ತೆರಳುತ್ತಿದ್ದಾಗ ಅದ್ಕುವರಿ ಪ್ರದೇಶದ ಇಂದ್ರಪ್ರಸ್ಥ ಬಳಿ ಕುದುರೆಯಿಂದ ಕೆಳಗೆ ಬಿದ್ದು ಮೃತಪಟ್ಟರು ಎಂದು ರಿಯಾಸಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ತಾಹೀರ್ ಭಟ್ ತಿಳಿಸಿದ್ದಾರೆ.
ತೀವ್ರ ಗಾಯಗೊಂಡ ಅವರನ್ನು ಅದ್ಕುವರಿಯ ಪ್ರಾಥಮಿಕ ಚಿಕಿತ್ಸಾಲಯಕ್ಕೆ ಸ್ಥಳಾಂತರಿಸಲಾಯಿತು. ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಪ್ರದೀಪ್ ಸಿಂಗ್(36) ಅವರನ್ನು ಜಮ್ಮು ಮತ್ತು ಕಾಶ್ಮೀರದ ಉಧಾಂಪುರ್ ಜಿಲ್ಲೆಯ 87ನೇ ಬ್ರಿಗೇಡ್ಗೆ ನಿಯೋಜಿಸಲಾಗಿತ್ತು. ಉತ್ತರಪ್ರದೇಶದ ಕಾನ್ಪುರದವರಾದ ಅವರು ಬ್ರಿಗೇಡಿಯರ್ ಕಮಲ್ ಸಿಂಗ್ ಚೌಹಾಣ್ ಅವರ ಪುತ್ರ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS