ಕುಮಾರಸ್ವಾಮಿಗೆ ಜಮೀರ್ ಬಹಿರಂಗ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-JDS-Jameer-ahmm

ಬೆಂಗಳೂರು, ಅ.25- ನಮಗಾಗಿ ನಾವು ಜೆಡಿಎಸ್ ಪಕ್ಷದಲ್ಲಿ ಇಲ್ಲ. ನಮ್ಮನ್ನು ನಂಬಿರುವ ಲಕ್ಷಾಂತರ ಕಾರ್ಯಕರ್ತರಿಗಾಗಿ ಜೆಡಿಎಸ್‍ನಲ್ಲಿದ್ದೇವೆ ಎಂದು ಶಾಸಕ ಜಮೀರ್ ಅಹಮ್ಮದ್‍ಖಾನ್ ಹೇಳಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಕ್ಷಕ್ಕೆ ಬೇಕಿಲ್ಲದಿದ್ದರೆ ಪಕ್ಷದಿಂದ ನಮ್ಮನ್ನು ಹೊರಹಾಕಿ ಅಮಾನತು ಮಾಡಿರುವುದು ಏಕೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ನೀಡಿದ್ದರೂ ಗೆಲ್ಲುತ್ತಿರಲಿಲ್ಲ. ಅವರ ನಡೆ ವಿರೋಧಿಸಿ ನಾವು ಕಾಂಗ್ರೆಸ್‍ಗೆ ಮತ ನೀಡಿದ್ದೆವು. ಇಷ್ಟಕ್ಕೂ ಫಾರೂಕ್ ಜೆಡಿಎಸ್ ಕಾರ್ಯಕರ್ತರಲ್ಲ. ಶ್ರೀನಿವಾಸ ಪ್ರಸಾದ್ ರಾಜೀನಾಮೆ ಬೆನ್ನಲ್ಲೇ ದಲಿತರ ಮೇಲೆ ಕುಮಾರಸ್ವಾಮಿಯವರಿಗೆ ಅಪಾರ ಕಾಳಜಿ ಹುಟ್ಟಿದೆ. ಹಾಗಾದರೆ ಜೆಡಿಎಸ್‍ನ ಅಧ್ಯಕ್ಷ ಸ್ಥಾನವನ್ನು ದಲಿತರಿಗೇ ನೀಡಲಿ. ಪಕ್ಷ ಅಧಿಕಾರಕ್ಕೆ ಬಂದರೆ ದಲಿತರನ್ನು ಸಿಎಂ ಮಾಡ್ತೇನೆ ಎಂದು ಹೇಳಲಿ ಎಂದು ಜಮೀರ್ ಸವಾಲು ಹಾಕಿದ್ದಾರೆ.

ವಿಧಾನಸೌಧದ ಬಳಿ ವಕೀಲರ ಹತ್ತಿರ ಹಣ ಸಿಕ್ಕಿರುವ ಬಗ್ಗೆ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ಅದು ಫ್ಲಾಟ್ ಕೊಳ್ಳುವುದಕ್ಕೆ ತರುತ್ತಿದ್ದ ಹಣ ಎಂದು ಹೇಳಿದ್ದಾರೆ. ಸುಮ್ಮನೆ ಇನ್ನೊಬ್ಬರ ಮೇಲೆ ಕುಮಾರಸ್ವಾಮಿಯವರು ಆರೋಪ ಮಾಡುವುದು ಸರಿಯಲ್ಲ ಎನ್ನುವ ಮೂಲಕ ಬಿಎಸ್‍ವೈ ಪರ ಜಮೀರ್ ಬ್ಯಾಟಿಂಗ್ ಮಾಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin