ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಲು ಹುಬ್ಬಳ್ಳಿಯಲ್ಲಿ ಜಮೀರ್ ಸಮಾವೇಶ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-JDS-Jameer-ahmm

ಹುಬ್ಬಳ್ಳಿ,ಡಿ.19- ಜೆಡಿಎಸ್ ಪಕ್ಷದಲ್ಲಿ ಒಂದಿಷ್ಟು ಬದಲಾವಣೆಗಳಾಗಿದ್ದರೂ ಮನಃಸ್ತಾಪ ಮಾತ್ರ ಶಮನವಾಗಿಲ್ಲ. ಅಮಾನತುಗೊಂಡಿರುವ ಶಾಸಕ ಜಮೀರ್ ಅಹ್ಮದ್ ಹೆಚ್. ಡಿ.ಕುಮಾರ ಸ್ವಾಮಿಗೆ ಟಾಂಗ್ ನೀಡಲು ಮುಂದಾಗಿದ್ದಾರೆ. ಜನವರಿ ಮೊದಲ ವಾರದಲ್ಲಿ ಅಲ್ಪಸಂಖ್ಯಾತ ಜಾಗೃತಿ ಸಮಾವೇಶ ನಡೆಸಲು ಹುಬ್ಬಳ್ಳಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.   ಸದ್ಯದ ಮಟ್ಟಿಗಿನ ಕಾಂಗ್ರೆಸ್ ಆಡಳಿತ ರಾಜ್ಯದ ಜನತೆಗೆ ಹೇಸಿಗೆ ಹುಟ್ಟಿಸಿದೆ. ಇನ್ನೂ ಕೇಂದ್ರದಲ್ಲಿ ಮೋದಿ ಆಡಳಿತ ಜನ ಪ್ರೀತಿಗೆ ಪಾತ್ರವಾಗಿದ್ದರೂ ರಾಜ್ಯದಲ್ಲಿ ಹಿಂದಿನ ಬಿಜೆಪಿ ಆಡಳಿತವನ್ನು ಜನರೇ ತಿರಸ್ಕರಿಸಿದ್ದಾರೆ. ಇದೇ ಒಳ್ಳೆ ಸಮಯ ಎಂದುಕೊಂಡ ಜೆಡಿಎಸ್ ಮುಂಬರುವ ವಿಧಾನಸಭಾ ಚುನಾವಣೆ ಗೆಲುವಿಗೆ ಈಗಾಗಲೇ ಸಿದ್ಧತೆ ನಡೆಸಿದೆ. ಅದರಲ್ಲೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಉತ್ತರ ಕರ್ನಾಟಕದತ್ತ ಚಿತ್ತಹರಿಸಿ, ಅಲ್ಲಿಯೇ ವಾಸ್ತವ್ಯಕ್ಕೆ ಹೊಸ ಮನೆಯನ್ನೇ ಮಾಡಿಕೊಂಡಿದ್ದಾರೆ.

ಆದರೆ ಈಗ ಶಾಸಕ ಜಮೀರ್ ಅಂಡ್ ಟೀಂ ಉತ್ತರ ಕರ್ನಾಟಕದಲ್ಲಿ ಎಚ್‍ಡಿಕೆಗೆ ಟಾಂಗ್ ನೀಡಲು ಮುಂದಾಗಿದೆ. ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತ ಜಾಗೃತಿ ಸಮಾವೇಶ ನಡೆಸಿ ಟಾಂಗ್ ಕೊಡಲು ಹೊರಟಿದೆ. ಇದಕ್ಕೆ ಕಾರಣ ಏನು ಗೊತ್ತಾ?  ಅವತ್ತು ಜೆಡಿಎಸ್‍ನಿಂದ ಅಮಾನತಾದ 8 ಮಂದಿಯಲ್ಲಿ ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಮೇಲೆ ಮಾತ್ರ ಎಚ್‍ಡಿಕೆ ಅವರಿಗೆ ಮೃದು ಧೋರಣೆ ಯಾಕೆ. ನಾವೆಲ್ಲ ಏನ್ಮಾಡಿದ್ದೇವೆ. ನಮ್ಮನ್ನ ಆಗ ಬಳಸಿಕೊಂಡು ಈಗ ಕೈಬಿಡ್ತಾರೆ. ನಮ್ಮ ಅಲ್ಪಸಂಖ್ಯಾತರಲ್ಲಿ ಅರಿವು ಮೂಡಿಸಲು. ನಮ್ಮಲ್ಲಿ ಒಗ್ಗಟ್ಟು ಮೂಡಿಸಲೆಂದೇ ಈ ಸಮಾವೇಶ ಎನ್ನುತ್ತಿದ್ದಾರೆ ಶಾಸಕ ಜಮೀರ್ ಅಹಮದ್
ಜನವರಿ ಮೊದಲ ವಾರದಲ್ಲಿ ಸಮಾ ವೇಶಕ್ಕೆ ನಿರ್ಧರಿಸಿದ್ದು, ಹುಬ್ಬಳ್ಳಿಗೆ ತೆರಳಿ ಪರಿಶೀಲನೆ ನಡೆಸಿದ್ದೂ ಆಗಿದೆ. ಜನವರಿ 5 ರಂದು ಈ ಕುರಿತು ಅಂತಿಮ ಸಭೆ ನಡೆಯಲಿದೆ. ಇನ್ನೂ ಸಮಾವೇಶದಲ್ಲಿ ಚಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ ಸೇರಿದಂತೆ 7 ಶಾಸಕರು ಭಾಗಿಯಾಗುತ್ತಿದ್ದಾರೆ.

ಅಲ್ಲಿಗೆ ಉತ್ತರ ಕರ್ನಾಟಕದಲ್ಲಿ ಭದ್ರ ಕೋಟೆ ತೆರೆಯಲು ಹೊರಟ ಜೆಡಿಎಸ್ ರಾಜ್ಯಾಧ್ಯ?ರಿಗೆ ಸರಿಯಾಗೇ ಟಾಂಗ್ ಕೊಡಲು ಪ್ಲಾನ್ ಮಾಡಿದ್ದಾರೆ ಎನ್ನು ವುದು ಖಚಿತ. ಇದಕ್ಕೆ ಎಚïಡಿಕೆ ನಿರ್ಧಾರ ವೇನು ಎನ್ನುವುದು ಕುತೂಹಲ ಮೂಡಿಸಿದೆ.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin