ಕುರಿಗಾಹಿಯನ್ನು ನೇಣಿಗೆ ಹಾಕಿ ಕುರಿಗಳನ್ನು ಕದ್ದೊಯ್ದ ಕಳ್ಳರು

ಈ ಸುದ್ದಿಯನ್ನು ಶೇರ್ ಮಾಡಿ

HANGING-BOYಗದಗ, ಮೇ 1- ಕುರಿ ಕಾಯುವ ಯುವಕನೊಬ್ಬನ ಶವ ಊರ ಹೊರಗಿನ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಕೊಲೆ ಇರಬಹುದು ಎಂದು ಸಂಬಂಧಿಕರು ಆರೋಪಿಸಿದ್ದಾರೆ.  ಜಿಲ್ಲೆಯ ರೋಣ ತಾಲ್ಲೂಕಿನ ಹಾಲಕೇರಿ ಗ್ರಾಮದ ಅನಿಲ್ (20) ಎಂಬ ಯುವಕ ಅದೇ ಊರಿನ ಕುರಿ ಮಾಲೀಕರೊಬ್ಬರ ಮನೆಯಲ್ಲಿ ಕುರಿ ಮೇಯಿಸುವ ಕೆಲಸ ಮಾಡುತ್ತಿದ್ದ. ಒಂದೆರಡು ದಿನಗಳ ಹಿಂದೆ 50 ಕುರಿಗಳು ಕಳೆದು ಹೋಗಿದ್ದವು. ನಿನ್ನೆ ಸಂಜೆ ಅನಿಲ್‍ನನ್ನು ಕುರಿ ಮಾಲೀಕರು ಕರೆದುಕೊಂಡು ಹೋಗಿದ್ದರು.ಸಂಜೆ ಸುಮಾರು 7.30ರ ಸಮಯದಲ್ಲಿ ಅನಿಲ್ ತನ್ನ ಮನೆಗೆ ಕರೆ ಮಾಡಿ ತನ್ನನ್ನು ಯಾರು ಹೊಡೆಯುತ್ತಿದ್ದಾರೆ ಎಂದು ಹೇಳಿದ. ಅಷ್ಟರಲ್ಲಿ ಮೊಬೈಲ್ ಕಟ್ಟಾಗಿತ್ತು. ನಂತರ ರಾತ್ರಿಯೆಲ್ಲಾ ಪೋಷಕರು ಸಂಬಂಧಿಕರು ಅನಿಲ್‍ನನ್ನು ಹುಡುಕಾಡಿದರು. ಎಲ್ಲೂ ಪತ್ತೆಯಾಗಲಿಲ್ಲ. ಕೊನೆಗೆ ಇಂದು ಮುಂಜಾನೆ ಹಾಲಕೇರಿ ಗ್ರಾಮದ ಹೊರ ಭಾಗದಲ್ಲಿರುವ ಮರವೊಂದರಲ್ಲಿ ಶವ ನೇತಾಡುತ್ತಿತ್ತು. ಕುರಿ ಮಾಲೀಕರೇ ತಮ್ಮ ಮಗನನ್ನು ಕೊಲೆ ಮಾಡಿ ಮರಕ್ಕೆ ನೇತು ಹಾಕಿದ್ದಾರೆ ಎಂದು ಹೆತ್ತವರು ಆರೋಪಿಸಿದ್ದಾರೆ. ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin