ಕುರಿ ಕದಿಯಲು ಬಂದವರನ್ನು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ

afgSDAGSDGಮಂಡ್ಯ, ಆ.5- ಮುಂಜಾನೆ ಕುರಿಗಳನ್ನು ಕಳ್ಳತನ ಮಾಡಲು ಗ್ರಾಮಕ್ಕೆ ಬಂದಿದ್ದ ಆರು ಮಂದಿ ಕಳ್ಳರನ್ನು ಬೆನ್ನಟ್ಟಿದ ಗ್ರಾಮಸ್ಥರ ಕೈಗೆ ಇಬ್ಬರು ಸಿಕ್ಕಿಬಿದ್ದಿದ್ದು, ಕಂಬಕ್ಕೆ ಕಟ್ಟಿ ಇವರಿಗೆ ಥಳಿಸಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಇಂದು ಮುಂಜಾನೆ 3 ಗಂಟೆಯಲ್ಲಿ ಸುನಗಹಳ್ಳಿ ಗ್ರಾಮಕ್ಕೆ ಆಟೋ ಮತ್ತು ಬೈಕ್‍ಗಳಲ್ಲಿ ಆರು ಮಂದಿ ಕಳ್ಳರು ಬಂದಿದ್ದಾರೆ.  ಶಬ್ದದಿಂದ ಎಚ್ಚೆತ್ತ ವ್ಯಕ್ತಿ ಹೊರಗೆ ಬಂದು ನೋಡುತ್ತಿದ್ದಾಗ ಈ ಕಳ್ಳರು ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣ ಇವರು ಕೂಗಿಕೊಂಡಾಗ ಗ್ರಾಮಸ್ಥರೆಲ್ಲ ಎಚ್ಚೆತ್ತುಕೊಂಡು ಹೊರಗೆ ದಾವಿಸುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ್ದಾರೆ.  ಕಳ್ಳರನ್ನು ಬೆನ್ನಟ್ಟಿದ ಗ್ರಾಮಸ್ಥರು ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ.  ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಗ್ರಾಮಸ್ಥರನ್ನು ಸಮಾಧಾನಪಡಿಸಿ ಕಳ್ಳರನ್ನು ವಶಕ್ಕೆ ಪಡೆಯಲು ಹರಸಾಹಸಪಟ್ಟರು. ಪರಾರಿಯಾಗಿರುವ ನಾಲ್ಕು ಮಂದಿ ಕಳ್ಳರಿಗಾಗಿ ಗ್ರಾಮಾಂತರ ಠಾಣೆ ಪೆಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin