ಕುರುಕ್ಷೇತ್ರ ಚಿತ್ರದ ಟ್ರೇಲರ್ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Darshan

ಬೆಂಗಳೂರು, ಸೆ. 29- ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೆ ಚಿತ್ರ `ಕುರುಕ್ಷೇತ್ರ’ ಚಿತ್ರತಂಡದಿಂದ ರಾಜ್ಯದ ಜನತೆಗೆ ಭರ್ಜರಿ ಗಿಫ್ಟ್ ಒಂದು ದೊರೆತಿದೆ. ವೃಷಭಾದ್ರಿ ಪ್ರೊಡಕ್ಷನ್ಸ್‍ನಡಿ ನಿರ್ಮಾಪಕ ಮುನಿರತ್ನಂ ನಿರ್ಮಿಸುತ್ತಿರುವ ಕುರುಕ್ಷೇತ್ರ ಚಿತ್ರದ ದೃಶ್ಯ ವೈಭವ ಹೇಗಿರುತ್ತದೆ ಎಂದು ದರ್ಶನ್ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿತ್ತು. ದಸರಾದ ಸಂಭ್ರಮದ ನಡುವೆಯೇ ಆ ಕುತೂಹಲವನ್ನು ತಣಿಸಿರುವ ಚಿತ್ರತಂಡ ಇಂದು ಬೆಳಗ್ಗೆ ಟ್ರೇಲರ್ ಮತ್ತು ಟೈಟಲ್ ವೀಡಿಯೋ ಬಿಡುಗಡೆ ಮಾಡಿದೆ.

ಈ ಎರಡು ವಿಡಿಯೋದಲ್ಲಿ ಕುರುಕ್ಷೇತ್ರದ ಅದ್ಧೂರಿ ಮೇಕಿಂಗ್ ಎದ್ದು ಕಾಣುತ್ತಿದೆ, ಭಾರತದ ಇತಿಹಾಸದಲ್ಲೇ ದಾಖಲೆ ಬರೆದ ಬಾಹುಬಲಿಯ ಮಾದರಿಯಲ್ಲಿ ಕುರುಕ್ಷೇತ್ರ ನಿರ್ಮಾಣಗೊಳ್ಳುತ್ತಿರುವುದು ಟ್ರೇಲರ್‍ನಲ್ಲಿ ಸ್ಪಷ್ಟವಾಗಿದೆ. ಆಸ್ಥಾನದ ದರ್ಬಾರ್ ಸೀನು ತೆಲುಗಿನ ಬಾಹುಬಲಿ ಚಿತ್ರವನ್ನು ನೆನಪಿಸುವಂತಿದ್ದರೆ, ದರ್ಶನ್‍ರ ದುರ್ಯೋಧನನ ಲುಕ್ ಹಾಗೂ ಡೈಲಾಗ್‍ನ ಅಬ್ಬರ ಹೊಸ ಭರವಸೆಗಳನ್ನು ಮೂಡಿಸಿದೆ. ವೃಷಾಭಾದ್ರಿ ಪ್ರೊಡಕ್ಷನ್ಸ್ ಬಿಡುಗಡೆ ಮಾಡಿರುವ ಟ್ರೀಲರ್ ಸಾಮಾಜಿಕ ಜಾಲಗಳಲ್ಲಿ ವೈರಲ್ ಆಗಿದೆ.

Facebook Comments

Sri Raghav

Admin