ಕುರುಬರಹಳ್ಳಿಯಲ್ಲಿ ಪಾನಿಪುರಿ ವ್ಯಾಪಾರಿಯ ಕೊಂದು ಮೂಟೆ ಕಟ್ಟಿದರು..!

ಈ ಸುದ್ದಿಯನ್ನು ಶೇರ್ ಮಾಡಿ

Kurubarahalli-Murder--01

ಬೆಂಗಳೂರು,ಫೆ.23-ಮನೆಗೆ ನುಗ್ಗಿದ ದುಷ್ಕರ್ಮಿಗಳು ಪತ್ನಿಯ ಮುಖಕ್ಕೆ ಸ್ಪ್ರೇ ಮಾಡಿ ಪಾನಿಪುರಿ ವ್ಯಾಪಾರಿಯನ್ನು ಬರ್ಬರವಾಗಿ ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಪರಾರಿಯಾಗಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.   ಕುರುಬರಹಳ್ಳಿ ಜೆಸಿನಗರದ ನಿವಾಸಿ ನರಸಿಂಹಮೂರ್ತಿ(35) ಕೊಲೆಯಾದ ಪಾನಿಪುರಿ ವ್ಯಾಪಾರಿ.

ಕುರುಬರಹಳ್ಳಿಯ ಸರ್ಕಲ್‍ನಲ್ಲಿ ಪ್ರತಿನಿತ್ಯ ತಳ್ಳು ಗಾಡಿಯಲ್ಲಿ ನರಸಿಂಹಮೂರ್ತಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದರು. ಮೂಲತಃ ರಾಮನಗರದವರಾದ ನರಸಿಂಹಮೂರ್ತಿ ಏಳು ವರ್ಷದ ಹಿಂದೆ ಮಾಗಡಿ ಮೂಲದ ಅನಿತಾ ಎಂಬುವರನ್ನು ವಿವಾಹವಾಗಿದ್ದು , ಕುರುಬಹಳ್ಳಿಯ ಜೆಸಿನಗರಕ್ಕೆ ಮನೆ ಮಾಡಿಕೊಂಡು ವಾಸವಾಗಿದ್ದು, ದಂಪತಿಗೆ ಐದು ವರ್ಷದ ಮಗನಿದ್ದು, ಈತ ಅಜ್ಜಿ ಮನೆಯಲ್ಲಿದ್ದಾನೆ.

ಎಂದಿನಂತೆ ನಿನ್ನೆ ಸಂಜೆ ಪಾನಿಪುರಿ ವ್ಯಾಪಾರ ಮುಗಿಸಿಕೊಂಡು ರಾತ್ರಿ 10.30ರ ಸಂದರ್ಭದಲ್ಲಿ ನರಸಿಂಹಮೂರ್ತಿ ಮನೆಗೆ ಬಂದಿದ್ದಾರೆ. ಊಟ ಮಾಡಿ ಪತ್ನಿ ಜೊತೆ ಮಾತನಾಡುತ್ತಾ ಕುಳಿತಿದ್ದಾಗ ಏಕಾಏಕಿ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಅನಿತಾ ಅವರ ಮುಖಕ್ಕೆ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿ ನಂತರ ಮಚ್ಚು-ಲಾಂಗ್‍ಗಳಿಂದ ನರಸಿಂಹಮೂರ್ತಿ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಮಂಚದ ಕೆಳಗೆ ತಳ್ಳಿ ಮುಂಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾರೆ.

ಅನಿತಾ ಅವರಿಗೆ ಬೆಳಗಿನ ಜಾವ ಪ್ರಜ್ಞೆ ಬಂದು ಪತಿಗಗಿ ಹುಡುಕಾಡಿದಾಗ, ಮನೆಯಲ್ಲೆಲ್ಲ ರಕ್ತ ಹರಡಿದ್ದು, ಮಂಚ ಕೆಳಗೆ ಮೃತದೇಹ ಪತ್ತೆಯಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ.

Facebook Comments

Sri Raghav

Admin