ಕುವೈತ್ ಕನ್ನಡ ಕೂಟದಿಂದ ಹುತಾತ್ಮ ವೀರ ಬೆಟದೂರ : ಕುಟುಂಬಕ್ಕೆ 1ಲಕ್ಷ ರೂ

ಈ ಸುದ್ದಿಯನ್ನು ಶೇರ್ ಮಾಡಿ

belagam4
ಹುಬ್ಬಳ್ಳಿ,ಸೆ.16- ಎಲ್ಲಾದರು ಇರು ಎಂತಾದರೂ ಇರು, ಕನ್ನಡ ತಾಯಿಯ ಕೀರ್ತಿ ಬೆಳಗಿಸು¿¿ ಎಂಬ ಕವಿಯ ಕವನದಂತೆ ಗಡಿಯಾಚೆಯ ಕುವೈಕ್ ಕನ್ನಡ  ಕೂಟ ಹಾಗೂ ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಇಂದು ಪತ್ರಕರ್ತರ ಭವನದಲ್ಲಿ ನಡೆದ ಸಭೆಯಲ್ಲಿ ವೀರ ಯೋಧ ಹನಮಂತಪ್ಪ ಕೊಪ್ಪದ ಅವರ ಕುಟುಂಬಕ್ಕೆ 1 ಲಕ್ಷ ರೂ. ಸಹಾಯ ಧನ ಚೆಕ್ಕನ್ನು ಹಸ್ತಾಂತರಿಸಿದರು.ಸಭೆಯನ್ನುದ್ದೇಶಿಸಿ ಮಾತನಾಡಿದ ಕೂಟದ ಅಧ್ಯಕ್ಷ ಪ್ರಶಾಂತ ಶೆಟ್ಟಿ. ಶಿಯಾಚಿನ್‍ನಲ್ಲಿ ಗಡಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ವೀರ ಮರಣಹೊಂದಿ, ಕನ್ನಡ ನಾಡಿನ ಕೀರ್ತಿಯನ್ನು ಜಗತ್ತಿಗೆ ಬೆಳಗಿದ ವೀರ ಯೋಧ ಹನಮಂತಪ್ಪ ಬೆಟದೂರ ಅವರ ಸೇವೆಯನ್ನು ಸ್ಮರಿಸಿದರು. ವೀರ ಯೋಧನ ಸಾಹಸಕ್ಕೆ ಗೌರವ ಸಲ್ಲಿಸಿದರು.
ಭಾರವಾದ ಹೃದಯ, ಕಣ್ಣಂಚಲ್ಲಿ ನೀರು ತುಂಬಿದ್ದರೂ, ಹನಮಂತಪ್ಪ ಅವರ ವೀರ ಗಾಥೆಯನ್ನು ಜಗತ್ತು ಸ್ಮರಿಸುತ್ತಿರುವುದನ್ನು ಕಣ್ಣಾರೆ ಕಂಡ ಹನಮಂತಪ್ಪ ಅವರ ತಾಯಿ ಬಸಮ್ಮ, ಪತ್ನಿ ಮಹಾದೇವಿಚೆಕ್ಕನ್ನು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮಹಾದೇವಿ, ಸರ್ಕಾರ ನೀಡಿದ ಆಶ್ವಾಸನೆಯಂತೆ ಸೈಟ್ ಹಾಗೂ ಜಮೀನು ತೋರಿಸಿದ್ದಾರೆ. ಇನ್ನೂ ಹಸ್ತಾಂತರ ಪ್ರಕೀಯೆ ನಡೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ರಾಜೇಶ ವಿಠ್ಠಲ, ಪ್ರಭು ಆಚಾರ್ಯ, ಡಾ.ಶಶಿಕಿರಣ ಪ್ರಭು, ಸಂಘದ ಅಧ್ಯಕ್ಷ ಗಣಪತಿ ಗಂಗೂಳಿ, ಕಾರ್ಯದರ್ಶಿ ನಾರಾಯಣ ವೈಧ್ಯ, ಗೀರೀಶ ಪಟ್ಟಣಶೆಟ್ಟಿ ಸೇರಿದಂತೆ ಮುಂತಾದವರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin