ಕುಷ್ಠಗಿ ತಾಲ್ಲೂಕಿನಲ್ಲಿ ಬಿಸಿಲ ತಾಪಕ್ಕೆ ಬಾಲಕ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Temprature-Temp

ಕುಷ್ಠಗಿ, ಏ.15- ಬಿಸಿಲ ತಾಪದಿಂದ ಅಸ್ವಸ್ಥಗೊಂಡಿದ್ದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಕುಷ್ಠಗಿ ತಾಲ್ಲೂಕಿನ ಸಾಸುವೆಹಾಳ್ ಗ್ರಾಮದಲ್ಲಿ ನಡೆದಿದೆ. ದೊಡ್ಡಬಸವ ಎಂಬಾತ ನಿನ್ನೆ ರಾತ್ರಿ ಊಟಮಾಡಿ ಮಲಗಿದ್ದ. ಆದರೆ ಮಧ್ಯರಾತ್ರಿ ಉಸಿರಾಟದ ತೊಂದರೆಯಾಗಿದೆ. ತಕ್ಷಣ ಆತನನ್ನು ಪೋಷಕಕರು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸದರೂ ಆತ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಜಿಲ್ಲೆಯಲ್ಲಿ ಅಧಿಕ ತಾಪಮಾನ 40 ಡಿಗ್ರಿ ತಲುಪಿದ್ದು ಜನರು ಹೊರಗೆ ಬರಲು ಹೆದರುವಂತಾಗಿದೆ. ವಿಪರೀತ ಬಿಸಿ ಗಾಳಿಯಿಂದ ರಾತ್ರಿಯಲ್ಲೂ ಕುಡ ಶಕೆಯಿಂದ ಹಲವರು ಆಸ್ವಸ್ಥಗೊಳ್ಳುತ್ತಿದ್ದಾರೆ.

ರಾತ್ರಿ ಹೆಚ್ಚಿನ ಶಕೆ ಇದ್ದ ಕಾರಣ ಬಾಲಕ ನಿತ್ರಾಣಗೊಂಡು ಅಸುನೀಗಿದ್ದಾನೆ ಎಮದು ಸ್ಥಳೀಯರು ಹೇಳಿದ್ದಾರೆ. ಆದರೆ ಆತ ಸೇವಿಸಿದ ಊಟದಲ್ಲಿ ವ್ಯತ್ಯಾಸವಾಗಿರಬಹುದೆಂದು ಶಂಕಿಸಲಾಗಿದೆ. ತಾವರಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಬಾಲಕನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin