ಕುಸಿದ ಕಟ್ಟಡದ ಅಡಿ ಸಿಲುಕಿ ಪವಾಡ ಸದೃಶವಾಗಿ ಬದುಕುಳಿದ 6 ವರ್ಷದ ಹಸುಗೂಸು..!

ಈ ಸುದ್ದಿಯನ್ನು ಶೇರ್ ಮಾಡಿ

6-year-baby
ನೈರೋಬಿ, ಮೇ 19-ಭಾರೀ ಬಿರುಗಾಳಿ ಮತ್ತು ಮಳೆಯಿಂದ ಕುಸಿದುಬಿದ್ದ 6 ಅಂತಸ್ತುಗಳ ಕಟ್ಟಡದ ಕೆಳಗೆ ಸುಮಾರು 80 ಗಂಟೆಗಳ ಕಾಲ ಸಿಲುಕಿದ್ದ 6 ತಿಂಗಳ ಮಗುವೊಂದು ಪವಾಡ ಸದೃಶ ಬದುಕುಳಿದ ಘಟನೆ ಕೀನ್ಯಾದ ನೈರೋಬಿಯಲ್ಲಿ ನಡೆದಿದೆ.  ನಾಲ್ಕು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ಕೀನಾದ ರೆಡ್‍ಕ್ರಾಸ್ ಸಿಬ್ಬಂದಿ ಶಿಶುವನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.

^-years

ಕಟ್ಟಡಗಳ ಆವಶೇಷಗಳಡಿ ಸುಮಾರು 80 ಗಂಟೆಗಳ ಕಾಲ ಸಿಲುಕಿದ್ದ ಮಗುವನ್ನು ಬಟ್ಟೆಯೊಂದರಲ್ಲಿ ಸುತ್ತಿ ಬಕೆಟ್‍ನಲ್ಲಿ ಇಡಲಾಗಿತ್ತು. ಹಸುಳೆ ನಿರ್ಜಲೀಕರಣಕ್ಕೆ ಒಳಗಾಗಿದ್ದರೂ ಯಾವುದೇ ಗಾಯಗಳಾಗಿಲ್ಲ ಎಂದು ರೆಡ್‍ಕ್ರಾಸ್‍ನ ಆಂಟನಿ ವಾಂಗಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.   ನನ್ನ ಮಗುವನ್ನು ಭಗವಂತ ರಕ್ಷಿಸಿದ್ದಾನೆ. ದೇವರು ದೊಡ್ಡವನು ಎಂದು ಮಗುವಿನ ತಂದೆ ರಲ್ಸಾನ್ ಸೈಸಿ ಪ್ರತಿಕ್ರಿಯಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin