ಕುಸ್ತಿಪಟು ಯೋಗೇಶ್ವರ್ ಗೆ ಈಗ ‘ಬೆಳ್ಳಿ’ ಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Yogishwar

ನವದೆಹಲಿ, ಆ.30- ಭಾರತೀಯ ಕ್ರೀಡಾಭಿಮಾನಿಗಳಿಗೆ ಖುಷಿ ಸುದ್ದಿ..! ರಿಯೋ ಡಿ ಜನೈರೋದಲ್ಲಿ ಇತ್ತೀಚೆಗಷ್ಟೆ ಮುಕ್ತಾಯಗೊಂಡ ಒಲಿಂಪಿಕ್ಸ್ನಲ್ಲಿ ಅರ್ಹತಾ ಸುತ್ತಿನಲ್ಲಿ ಸೋತು ನಿರಾಸೆ ಅನುಭವಿಸಿದ್ದ ಭಾರತೀಯ ಕುಸ್ತಿಪಟು ಯೋಗೇಶ್ವರ್ ದತ್ ಅಚ್ಚರಿ ಮತ್ತು ಸಂತಸದ ಸುದ್ದಿ ಬಂದಿದೆ.  2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಯೋಗೇಶ್ವರ್ಗೆ ಪೋಡಿಯಂ ಬಡ್ತಿ ಸಿಕ್ಕಿದ್ದು, ಅವರ ಕಂಚಿನ ಪದಕಕ್ಕೆ ನಾಲ್ಕು ವರ್ಷಗಳ ನಂತರ ಬೆಳ್ಳಿ ಪದಕದ ಅದೃಷ್ಟ ಒಲಿದಿದೆ. ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ ರಷ್ಯಾ ಕುಸ್ತಿಪಟು ಬೆಸಿಕ್ ಕುಡುಕೋವ್ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಯೋಗೇಶ್ವರ್ ದತ್ಗೆ ಅನಿರೀಕ್ಷಿತ ಅದೃಷ್ಟ ಖುಲಾಯಿಸಿದೆ.

ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಕುಡುಕೋವ್ 27ನೆ ವಯಸ್ಸಿನಲ್ಲಿ 2013ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟರು. ಆದರೆ, ರಿಯೋ ಒಲಿಂಪಿಕ್ಸ್ಗೆ ಪೂರ್ವಭಾವಿಯಾಗಿ ನಡೆದ ಉದ್ದೀಪನ ಪರೀಕ್ಷೆಯಲ್ಲಿ ರಷ್ಯಾ ಅಥ್ಲೀಟ್ಗಳು ಸಿಕ್ಕಿಹಾಕಿಕೊಂಡ ಹಿನ್ನೆಲೆಯಲ್ಲಿ ಲಂಡನ್ ಗೇಮ್ಸ್ ವೇಳೆ ಸಂಗ್ರಹಿಸಿದ್ದ ಕುಡಕೋವ್ ಅವರ ಮಾದರಿಯನ್ನು ಅಂತಾರಾಷ್ಟ್ರೀಯ ಸಮಿತಿ ಮರು ಪರೀಕ್ಷೆ ನಡೆಸಿತ್ತು. ಉದ್ದೀಪನ ಪಿಡುಗು ತಡೆಯುವ ಸಲುವಾಗಿ ಇದೀಗ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಅಥ್ಲೀಟ್ಗಳ ಮಾದರಿಯನ್ನು 10 ವರ್ಷಗಳವರೆಗೆ ಸಂಗ್ರಹಿಸಿ ಉನ್ನತ ಪರೀಕ್ಷೆ ನಡೆಸುತ್ತಿದೆ. ಹೀಗಾಗಿ ಉದ್ದೀಪನ ಪರೀಕ್ಷೆ ವೇಳೆ ಕುಡಕೋವ್ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ಕುಡಕೋವ್ನಿಂದ ಪದಕ ವಾಪಸ್ ಪಡೆದು ಅವರ ವಿರುದ್ಧ ಸೋತಿದ್ದ ಯೋಗೇಶ್ವರ್ ದತ್ಗೆ ನೀಡಲು ಉದ್ದೇಶಿಸಲಾಗಿದೆ ಎಂದು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯೂಡಬ್ಲ್ಯೂ) ಹೇಳಿಕೆಯನ್ನು ಉಲ್ಲೇಖಿಸಿದೆ.  ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ ಕುಸ್ತಿಪಟು ಸುಶೀಲ್ಕುಮಾರ್ ಹಾಗೂ ಶೂಟರ್ ವಿಜಯ್ಕುಮಾರ್ ಸಾಲಿನಲ್ಲಿ ಸದ್ಯ ಯೋಗೇಶ್ವರ್ದತ್ ಹೆಸರು ಮಿಂಚಲಿದ್ದು, ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin