ಕೂಲಿ ಕಾರ್ಮಿಕನ ಮಗನಾದ ನಾನು ವಿಪಕ್ಷ ನಾಯಕನಾಗಿರುವುದು ಈ ಸಂವಿಧಾನದಿಂದಲೇ : ಖರ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

Mallikarjun-Kharge--01

ಬೆಂಗಳೂರು, ಡಿ.31- ಸಂವಿಧಾನ ಬದಲಿಸಬೇಕೆಂಬ ಬಿಜೆಪಿ ಮುಖಂಡರ ಹೇಳಿಕೆಯನ್ನು ತಾವು ತೀವ್ರವಾಗಿ ಖಂಡಿಸುವುದಾಗಿ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಅವರ ಹೆಸರು ಹೇಳದೆಯೇ ತೀವ್ರ ವಾಗ್ದಾಳಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಂವಿಧಾನ ಬದಲಿಸುವಂತಹ ಹೇಳಿಕೆ ನೀಡುವ ನಾಯಕರ ನಾಲಿಗೆಗೆ ಬೀಗ ಹಾಕುವ ಕೆಲಸ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಪ್ರಧಾನಿಯಾಗಿರುವುದು, ಕೂಲಿ ಕಾರ್ಮಿಕನ ಮಗನಾದ ನಾನು ವಿರೋಧ ಪಕ್ಷದ ಮುಖಂಡನಾಗಿರುವುದು ಇಂತಹ ಸಂವಿಧಾನದಿಂದಲೇ ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಸಣ್ಣಪುಟ್ಟ ವಿಚಾರಗಳು ಈಗಾಗಲೇ ತಿದ್ದುಪಡಿಯಾಗಿವೆ. ಸಂವಿಧಾನದಿಂದ ದೇಶ ಸದೃಢವಾಗಿದೆ. ಸಂಸತ್‍ನಲ್ಲಿ ಇಂತಹ ವಿಚಾರ ಪ್ರಸ್ತಾಪವಾದರೆ ನಾವು ಮೊದಲು ಖಂಡಿಸುತ್ತೇವೆ ಎಂದು ಹೇಳಿದರು.   ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ರಾಜಕೀಯ ಪ್ರವೇಶ ಮಾಡಬಹುದು. ಸೂಪರ್ ಸ್ಟಾರ್ ರಜನಿಕಾಂತ್ ಅವರು ಯಾವ ತತ್ವ-ಸಿದ್ಧಾಂತದ ಮೇಲೆ ಪಕ್ಷ ಕಟ್ಟುತ್ತಾರೆ ಎಂಬುದನ್ನು ನೋಡಬೇಕು ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

Facebook Comments

Sri Raghav

Admin