ಕೃಷಿ ಉತ್ಪನ್ನ ಮಾರುಕಟ್ಟೆಯ ಬಗ್ಗೆ  ರೈತರ ಅರಿವಿಗೆ ಎಪಿಎಂಸಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

malavali-2
ಮಳವಳ್ಳಿ, ಫೆ.16- ಮದ್ದೂರು ಮಾರುಕಟ್ಟೆಯಿಂದ ಪ್ರತ್ಯೇಕಗೊಂಡಿರುವ ಮಳವಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯ ಬಗ್ಗೆ ತಾಲ್ಲೂಕಿನ ರೈತರಿಗೆ ಅರಿವು ಮೂಡಿಸಲು ಭಾಗಿದಾರರ ಸಭೆ ಕರೆಯಲು ಎಪಿಎಂಸಿ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.ಪಟ್ಟಣ ಎಪಿಎಂಸಿ ಸಭಾಂಗಣದಲ್ಲಿ ಅಧ್ಯಕ್ಷ ಮುಟ್ಟನಹಳ್ಳಿ ಅಂಬರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚೆರ್ಚಿಸಿ, ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಈ ಬಗ್ಗೆ ಸ್ಥಳೀಯ ರೈತರಿಗೆ ಮನವರಿಕೆ ಮಾಡಲು ಭಾಗಿದಾರರ ಸಭೆ ಕರೆಯಲು ಹಾಗೂ ಅದಕ್ಕೆ ಪೂರಕವಾದ ಅನುದಾನ ಬಿಡುಗಡೆ ಮಾಡುವಂತೆ ಮಾರಾಟ ಮಂಡಳಿ ಪ್ರಧಾನ ವ್ಯವಸ್ಥಾಪಕರನ್ನು ಕೋರಲು ನಿರ್ಧರಿಸಲಾಯಿತು.

ತಾಲ್ಲೂಕಿನ ಕಿರುಗಾವಲು ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳ ಬಾಡಿಗೆ ನಿಗದಿಪಡಿಸಲು ಅನುಮೋದನೆ ಪಡೆದು ರೈತರಿಗೆ ನೀಡುವುದು ಮತ್ತು ಒಂದು ಅಂಗಡಿಯನ್ನು ಅಂಗವಿಕಲರಿಗೆ ನೀಡಲು ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.  ಮುಂದಿನ ತಿಂಗಳು ಮುಖ್ಯಮಂತ್ರಿಗಳು ಮಳವಳ್ಳಿಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಬರಲಿದ್ದು ಅಂದು ನಮ್ಮ ನೂತನ ಕಚೇರಿ ಹಾಗೂ ಕಿರುಗಾವಲು ಅಂಗಡಿ ಮಳಿಗೆಗಳನ್ನು ಉದ್ಘಾಟನೆ ಮಾಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬೆಲೆ ಬಾಳುವ ಮರಗಳ ಕಳ್ಳತನವಾಗಿದೆ ಅದರಿಂದ ಮುಖ್ಯ ಮಾರುಕಟ್ಟೆ ಪ್ರಾಂಗಣದ ಸುತ್ತಲೂ ತಂತಿ ಬೇಲಿ ಅಳವಡಿಸಲು ಹಾಗೂ ಸಮಿತಿಯ ಸ್ವತ್ತನ್ನು ಸಂರಕ್ಷಿಸಲು ಪ್ರಸ್ತಾವ ಸಲ್ಲಿಸಿ ಅನುಮೋದನೆ ಪಡೆಯಲು ಚರ್ಚಿಸಿ ನಿರ್ಧರಿಸಲಾಯಿತು.ಕಾರ್ಯದರ್ಶಿ ಶೀಕಂಠಪ್ರಭು, ಸದಸ್ಯರಾದ ವಿಶ್ವ, ಶಿವಣ್ಣ, ನಾಗಮ್ಮ, ಸರೋಜಮ್ಮ, ಮುಂತಾದ ಸದಸ್ಯರ ಭಾಗವಹಿಸಿದರು

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin