ಕೃಷಿ ಯಂತ್ರಧಾರೆಯ ಬಗ್ಗೆ ರೈತರಿಗೆ ಅರಿವು ಅಗತ್ಯ : ಸಚಿವ ಕೃಷ್ಣ ಬೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

5

ಬೆಳಗಾವಿ,ಮಾ.1- ರೈತರು ಕೃಷಿ ಯಂತ್ರಧಾರೆ ಎಂದರೆ ಏನು ಹಾಗೂ ಅದರ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬೇಕು ಎಂದು ಅರಿತುಕೊಳ್ಳುವುದು ಅಗತ್ಯವಾಗಿದೆ. ಅಲ್ಲದೆ ರೈತರಿಗೆ ಕೃಷಿಯಂತ್ರಧಾರೆ ಯೋಜನೆಯ ಉಪಯೋಗವನ್ನು ಯಾವ ರೀತಿ ತೆಗೆದುಕೊಳ್ಳಬೇಕೆಂದು ತಿಳಿಯುವುದು ಮುಖ್ಯವಾಗಿದೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.ಚಿಕ್ಕೋಡಿ ತಾಲೂಕಿನ ಕಡಕಲಾಟ ಗ್ರಾಮ ಪಂಚಾಯತಿ ಆವರಣದಲ್ಲಿ ಕೃಷಿ ಇಲಾಖೆ ಹಾಗೂ ವಿಎಸ್‍ಟಿ ಟ್ಯಾಕ್ಟರ್ ಆ್ಯಂಡ್ ಟ್ಯಾಲರ್ಸ್ ಕಂಪನಿಯ ಸಹಭಾಗಿತ್ವದಲ್ಲಿ ನಿನ್ನೆ ಏರ್ಪಡಿಸಿದ್ದ, ಕೃಷಿಯಂತ್ರಧಾರೆ ಕೇಂದ್ರ ಉದ್ಘಾಟನಾ ಕಾರ್ಯಕ್ರಮಕ್ಕೆ ದೀಪ ಬೆಳೆಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಚಿಕ್ಕೋಡಿ ವಿಭಾಗದಲ್ಲಿ 4ನೇ ಕೃಷಿಯಂತ್ರಧಾರೆ ಕೇಂದ್ರಕ್ಕೆ ನಿನ್ನೆ ಚಾಲನೆ ನೀಡಿದರು, 2012-13ನೇ ಸಾಲಿನೊಳಗೆ ಕೃಷಿ ಯಂತ್ರೋಪಕರಣ ಖರೀದಿಗೆ 119ಕೋಟಿ ರೂ. ಇತ್ತು, ಈ ವರ್ಷ 416 ಕೋಟಿಯಾಗಿದೆ. ಹಿಂದಿನ ವರ್ಷಕ್ಕೆ ಹೊಲಿಸಿದರೆ 4 ಪಟ್ಟು ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದರು.

2012-13ನೇ ಸಾಲಿನೊಳಗೆ ರೈತರ ಖಾತೆಗೆ ಕೃಷಿ ಯಂತ್ರೋಪಕರಣ ಸಬ್ಸಿಡಿ 11.39 ಕೋಟಿ ರೂ. ಅನುದಾನ ಬಿಡುಗಡೆಯಾಗಿತು. 14-15ನೇ ಸಾಲಿಗೆ 23.24 ಕೋಟಿ, ಈ ವರ್ಷ 25 ಕೋಟಿ ದಾಟಿದೆ. ಅಲ್ಲದೆ ಈ ವರ್ಷ 12 ರೈತ ಸಂಪರ್ಕ ಕೇಂದ್ರ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದು ಹೇಳಿದರು.ರಾಜ್ಯದೊಳಗೆ ಈ ವರ್ಷ ಕೃಷಿ ಇಲಾಖೆಯಿಂದ ಹನಿ ನೀರಾವರಿಗೆ 370 ಕೋಟಿ ಅನುದಾನ ನೀಡಲಾಗಿದೆ. ಅದರೊಳಗೆ ಜಿಲ್ಲೆಗೆ 11 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮತ್ತು ಮಾ. 20ರೊಳಗಾಗಿ ಚಿಕ್ಕೋಡಿಗೆ ಹೆಚ್ಚುವರಿಯಾಗಿ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಸಚಿವರು ತಿಳಿಸಿದರು.ಕೃಷಿ ಯಾಂತ್ರೀಕರಣ ಮತ್ತು ಸಂಸ್ಕರಣೆ ಯೋಜನೆಯಡಿ ಉಳಿಮೆಯಿಂದ ಕೊಯ್ಲಿವರೆಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಬಾಡಿಗೆ ಆಧಾರಿತ ನೀಡಲಾಗುತ್ತಿದೆ.

ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಜಿಲ್ಲೆಯಲ್ಲಿ ಹನಿ ನೀರಾವರಿ ಅಳವಡಿಸಿಕೊಂಡಿರುವ ರೈತರಿಗೆ ಕಾಲ ಮಿತಿಯೊಳಗೆ ಅನುದಾನ ಬಿಡುಗಡೆ ಮಾಡಬೇಕು. ಈ ಭಾಗದಲ್ಲಿ ಹೆಚ್ಚಾಗಿ ತಂಬಾಕು ಬೆಳೆಯುವ ರೈತರು ಇದ್ದಾರೆ. ಅವರಿಗೆ ಪರ್ಯಾಯ ಬೆಳೆ ಬೆಳಯಲು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ ಕೃಷಿ ವಿಷಯವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಸದಸ್ಯರು, ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು, ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin