ಕೃಷ್ಣಗಂಗಾ, ರೆಟ್ಲೆ ಯೋಜನೆಗಳಿಗೆ ವಿಶ್ವಬ್ಯಾಂಕ್ ಅನುಮತಿ, ಪಾಕ್‍ಗೆ ಭಾರೀ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

World-Bank--01

ವಾಷಿಂಗ್ಟನ್, ಆ.2-ಸಿಂಧು ಜಲ ಒಪ್ಪಂದದ(ಇಂಡಸ್ ವಾಟರ್ಸ್ ಟ್ರೀಟಿ ಅಥವಾ ಐಡಬ್ಲ್ಯುಟಿ) ಅಡಿ ಕೆಲವು ನಿರ್ಬಂಧಗಳನ್ನು ವಿಧಿಸಿ ಜೇಲಂ ಮತ್ತು ಚೇನಾಬ್ ನದಿಗಳ ಉಪನದಿಗಳಲ್ಲಿ ಜಲವಿದ್ಯುತ್ ಯೋಜನೆಗಳಿಗೆ ವಿಶ್ವಬ್ಯಾಂಕ್ ಅನುಮತಿ ನೀಡಿದೆ.  ಭಾರತದಿಂದ ನಿರ್ಮಿಸಲಾಗುತ್ತಿರುವ ಕೃಷ್ಣಗಂಗಾ (330 ಮೆಗಾವ್ಯಾಟ್‍ಗಳು) ಹಾಗೂ ರೆಟ್ಲೆ(850 ಮೆ.ವ್ಯಾ.) ಜಲವಿದ್ಯುತ್ ಘಟಕಗಳಿಗೆ ವಿರೋಧಿಸುತ್ತಿದ್ದ ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್‍ನ ಈ ನಿರ್ಧಾರದಿಂದ ಭಾರೀ ಮುಖಭಂಗವಾಗಿದೆ.

ಐಡಬ್ಲ್ಯುಟಿಗೆ ಸಂಬಂಧಪಟ್ಟಂತೆ ಭಾರತ-ಪಾಕಿಸ್ತಾನ ನಡುವೆ ನಡೆದ ಕಾರ್ಯದರ್ಶಿ-ಮಟ್ಟದ ಮಾತುಕತೆ ಮುಕ್ತಾಯದ ವೇಳೆ ಈ ಸಂಬಂಧ ತಾನು ಈ ಎರಡೂ ಯೋಜನೆಗಳಿಗೆ ಒಪ್ಪಿಂಗೆ ನೀಡಿರುವುದಾಗಿ ವಿಶ್ವಬ್ಯಾಂಕ್ ತಿಳಿಸಿದೆ.  ಈ ಎರಡೂ ನದಿಗಳು ಮತ್ತು ಸಿಂಧುವನ್ನು ಪಶ್ಚಿಮ ನದಿಗಳೆಂದು ಐಡಬ್ಲ್ಯುಟಿಯಲ್ಲಿ ಪರಿಗಣಿಸಲಾಗಿದೆ. ಪಾಕಿಸ್ತಾನವು ಇವುಗಳ ಅನಿರ್ಬಂಧಿತ ಬಳಕೆ ಹೊಂದಿದೆ. ಒಪ್ಪಂದದ ಅನುಬಂಧಗಳಲ್ಲಿನ ನಿರ್ದಿಷ್ಟ ನಿರ್ಬಂಧಗಳಿಗೆ ಒಳಪಟ್ಟು ಈ ನದಿಗಳಲ್ಲಿ ಜಲವಿದ್ಯುತ್ ಯೋಜನೆಗಳನ್ನು ಕೈಗೊಳ್ಳಲು ಭಾರತಕ್ಕೆ ಅನುಮತಿ ನೀಡಲಾಗಿದೆ ಎಂದು ಬ್ಯಾಂಕ್ ಪ್ರತ್ಯೇಕ ಹೇಳಿಕೆಯಲ್ಲಿ ವಿವರಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin