ಕೃಷ್ಣ ಅವರ ಬೆಂಬಲಿಗ ರವೀಂದ್ರ ಶ್ರೀಕಂಠಯ್ಯನವರ ಜೊತೆ 13 ಬೆಂಬಲಿಗರ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

Raveendra-Srikantaiah

ಮಂಡ್ಯ,ಫೆ.3-ಕಾಂಗ್ರೆಸ್‍ಗೆ ರಾಜೀನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಬೆಂಬಲಿಗ ರವೀಂದ್ರ ಶ್ರೀಕಂಠಯ್ಯ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ 13 ಮಂದಿ ಬೆಂಬಲಿಗರು ಫ್ಯಾಕ್ಸ್ ಮೂಲಕ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ರಾಜೀನಾಮೆ ನೀಡಿದ್ದಾರೆ.   ಗ್ರಾಮಪಂಚಾಯ್ತಿ ಸದ್ಯರಾದ ನಾಗೇಶ್, ನಾಗೇಂದ್ರ, ಡಿ.ರಂಗನಾಥ್, ಎಂ.ಸುರೇಶ್, ಮಂಜುಳಾ ರವಿಕುಮಾರ್, ದೇವಮ್ಮ ವೆಂಕಟೇಶ್, ಲಕ್ಷ್ಮೀಶ, ನಾಗರತ್ನ, ಶ್ರೀಕಂಠ, ಜಯಮ್ಮ ಮರಿಗೌಡ, ಅಶ್ವಿನಿ ಶ್ರೀಧರ್, ಪವಿತ್ರ ನಾಗೇಶ್, ಸಣ್ಣ ಬೋರಯ್ಯ, ವಿ.ಆರ್.ಮಾದೇಗೌಡ ಮತ್ತು ಸುನಿತಾ ದಿವಾಕರ್ ಅವರು ರಾಜೀನಾಮೆ ಪತ್ರವನ್ನು ಫ್ಯಾಕ್ಸ್ ಮೂಲಕ ಜಿ.ಪರಮೇಶ್ವರ್‍ಗೆ ಅವರಿಗೆ ಸಲ್ಲಿಸಿದ್ದಾರೆ.

ಇದರೊಂದಿಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್‍ನ ಅರ್ಧದಷ್ಟು ಪ್ರಮುಖ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿದಂತಾಗಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಎಸ್.ಎಂ.ಕೃಷ್ಣ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಕಟ್ಟಾ ಬೆಂಬಲಿಗ ರವೀಂದ್ರ ಶ್ರೀಕಂಠಯ್ಯ ರಾಜೀನಾಮೆ ನೀಡಿದ್ದರು.  ಈಗ ಶ್ರೀಕಂಠಯ್ಯ ಅವರ ಬೆಂಬಲಿಗರು ರಾಜೀನಾಮೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ಪಕ್ಷಕ್ಕೆ ಸೇರಬೇಕು, ಯಾವ ಪಕ್ಷ ನಮಗೆ ಸೂಕ್ತ ಸ್ಥಾನಮಾನ ನೀಡುತ್ತದೆಯೋ ಆ ಪಕ್ಷಕ್ಕೆ ಹೋಗುವುದರ ಬಗ್ಗೆ ತೀರ್ಮಾನಿಸಿ ಮುಂದಿನ ರಾಜಕೀಯ ಬಗ್ಗೆ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin