ಕೆಂಚಮ್ಮನ ನಡೆಮುಡಿ ಉತ್ಸವ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

kenchamma

ಹುಳಿಯಾರಿನ, ಆ.31- ಇಲ್ಲಿನ ಕೆಂಚಮ್ಮದೇವಿಯ ಶ್ರಾವಣ ಮಾಸದ ಫಲಹಾರ ಸೇವೆ ಅಂಗವಾಗಿ ದೇವಾಲಯದಲ್ಲಿ ವಿವಿಧ ಪೂಜ ಕೈಂಕರ್ಯಗಳು ಯಶಸ್ವಿಯಾಗಿ ಜರುಗಿದವು.ಬೆಳಗ್ಗೆ ಕನ್ಯೆಯರ 23 ಕಳಶದೊಂದಿಗೆ ಹುಳಿಯಾರು ಕೆರೆಯಿಂದ ಆರಂಭಗೊಂಡ ಕೆಂಚಮ್ಮದೇವಿಯ ನಡೆಮುಡಿ ಉತ್ಸವವು ಮೂಲ ಸ್ಥಾನವಾದ ಕೆರೆಯ ಏರಿ ಮೇಲೇರಿರುವ ದೇವಾಲಯಕ್ಕೆ ತೆರಳಿ ಪೂಜಕಾರ್ಯ ನೆರವೇರಿಸಿದರು. ನಂತರ ಉತ್ಸವವು ಶ್ರೀರಂಗನಾಥ ಸ್ವಾಮಿ, ಹುಳಿಯಾರಮ್ಮ ದೇವಾಲಯದ ಮುಖಾಂತರ ಕೆಂಚಮ್ಮದೇವಿಯ ದೇವಾಲಯಕ್ಕೆ ತಲುಪಿತು.
ದೇವಾಲಯದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ, ಅನ್ನ ದಾಸೋಹ ಕಾರ್ಯಾಕ್ರಮ ನಡೆದವು.
ಉತ್ಸವದಲ್ಲಿ ಗ್ರಾಮದೇವತೆಗಳಾದ ಶ್ರೀದುರ್ಗಾ ಪರಮೇಶ್ವರಿ, ಹುಳಿಯಾರಮ್ಮ ದೇವಿಯು ಪಾಲ್ಗೊಂಡಿದ್ದವು. ಹುಳಿಯಾರು, ಲಿಂಗಪ್ಪನಪಾಳ್ಯ, ಕಾಮಶೆಟ್ಟಿಪಾಳ್ಯ, ಕುರಿಹಟ್ಟಿ, ಕೆಸಿ ಪಾಳ್ಯ, ಸೋಮಜ್ಜನಪಾಳ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅಪಾರ ಭಕ್ತರು ಪಾಲ್ಗೊಂಡಿದ್ದರು.ಶಿವನಂಜಪ್ಪ, ಬಡಗಿ ರಾಮಣ್ಣ, ಕಾರ್ಯದರ್ಶಿ ಷಡಾಕ್ಷರಿ, ಪಟೇಲ್ ರಾಜಕುಮಾರ್, ನಂಜುಡಪ್ಪ, ಚನ್ನಬಸಪ್ಪ, ಶಂಕರಪ್ಪ, ಈಶಪ್ಪ ಮತ್ತಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin