ಕೆಂಪುಕೋಟೆ ಮೇಲೆ ನಿಂತು ಪಾಕ್‍ಗೆ ಖಡಕ್ ಎಚ್ಚರಿಕೆ ನೀಡಿದ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.15-ಭಾರತವು ಯಾವುದೇ ಕಾರಣಕ್ಕೂ ಭಯೋತ್ಪಾದನೆ ಮತ್ತು ಉಗ್ರವಾದಕ್ಕೆ ಜಗ್ಗುವುದಿಲ್ಲ ಎಂದು ದೃಢವಾದ ಮಾತುಗಳಲ್ಲಿ ಹೇಳಿರುವ ಪ್ರಧಾನಮಂತ್ರಿ ನರೇಂದ್ರಮೋದಿ, ಯುವ ಜನರು ಹಿಂಸಾಚಾರ ಮಾರ್ಗವನ್ನು ತೊರೆದು ಮುಖ್ಯವಾಹಿನಿಗೆ ಹಿಂದಿರುಗಬೇಕು ಎಂದು ಕರೆ ನೀಡಿದ್ದಾರೆ.  ಕಲಹಪ್ರಿಯ ದೇಶ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ ಮೋದಿ, ನಮ್ಮ ಮೇಲೆ ಆಕ್ರಮಣ ಮಾಡುವ ಭಯೋತ್ಪಾದಕರನ್ನು ಪಾಕಿಸ್ತಾನ ವೈಭವೀಕರಿಸುತ್ತಿದ್ದರೆ, ಪೇಶಾವರದಲ್ಲಿ ಉಗ್ರರ ದಾಳಿಯಿಂದ ಮಕ್ಕಳು ಸಾವಿಗೀಡಾಗಿದ್ದಕ್ಕೆ ಭಾರತವು ಮಮ್ಮಲ ಮರುಗಿದೆ ಎಂದು ಭಾರತ-ಪಾಕ್ ನಡುವಣ ವ್ಯತ್ಯಾಸವನ್ನು ಅರ್ಥಗರ್ಭಿತವಾಗಿ ತಿಳಿಸಿದರು.

Cp3ZICPWcAAqbLp

proxy

ರಾಜಧಾನಿಯ ಐತಿಹಾಸಿಕ ಕೆಂಪುಕೋಟೆ ಮೇಲೆ ದೇಶದ ಜನತೆಯನ್ನು ಉದ್ದೇಶಿಸಿ 70ನೇ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದ ಅವರು ಭಾರತ ಯಾವುದೇ ಕಾರಣಕ್ಕೂ ಭಯೋತ್ಪಾದನೆ, ಆತಂಕವಾದ ಅಥವಾ ಉಗ್ರವಾದವನ್ನು ಸಹಿಸುವುದಿಲ್ಲ ಎಂದು ದಶದಿಕ್ಕುಗಳಲ್ಲೂ ಮಾರ್ದನಿಸುವಂತೆ ಸಾರಿದರು.  ಪ್ರಸ್ತುತ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದ ಅವರು ಸಾಮಾಜಿಕ ನ್ಯಾಯದ ಭದ್ರ ಬುನಾದಿ ಇರುವ ಸದೃಢ ಸಮಾಜ ನಿರ್ಮಾಣವಾಗದ ಹೊರತು ಬಲಿಷ್ಠ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡಬೇಕೆಂದು ಅವರು ಕರೆ ಕೊಟ್ಟರು. ಜಾತಿಯತೆ ಅಥವಾ ಅಸ್ಪೃಶ್ಯತೆಯಂಥ ಪ್ರಾಚೀನ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ಕಠಿಣ ಮತ್ತು ಸೂಕ್ಷ್ಮ ಧೋರಣೆ ಅಗತ್ಯವಾಗಿದೆ. ನಮ್ಮ ಸಮಾಜ ಒಗ್ಗೂಡುವುದು ಮುಖ್ಯವಾಗಿದೆ. ಜಾತಿ ಮತ್ತು ಪಂಥಗಳು ದೇಶಕ್ಕೆ ಮಾರಕವಾಗಿವೆ. ಇವೆಲ್ಲ ವಿಷಯಗಳ ಬಗ್ಗೆ ಧನಿ ಎತ್ತುವುದು ಅಗತ್ಯವಾಗಿದೆ ಎಂದು ಮೋದಿ ಹೇಳಿದರು.

Cp4Df3IXEAEX8Fb

Cp4DRV7XYAAPYeo

ಬಡತನ ನಿರ್ಮೂಲನೆಯ ಸ್ವಾತಂತ್ರ್ಯಕ್ಕಿಂತ ದೊಡ್ಡ ಸ್ವಾತಂತ್ರ್ಯ ಇನ್ನೊಂದಿಲ್ಲ ಎಂದು ವಿಶ್ಲೇಷಿಸಿದ ಅವರು, ಇದರ ವಿರುದ್ಧ ಹೋರಾಡಲು ಸಾರ್ಕ್ ದೇಶಗಳು ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು. 35 ಸಾವಿರಕ್ಕೂ ಹೆಚ್ಚು ಯೋಧರು ಗಡಿ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅವರಿಂದ ನಾವು ಇಲ್ಲಿ ಶಾಂತಿಯಿಂದ ಬದುಕುತ್ತಿದ್ದೇವೆ. ಅವರನ್ನು ನಾವು ಮರೆಯಲು ಸಾಧ್ಯವೇ ಎಂದು ಮೋದಿ ಪ್ರಶ್ನಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನು ಶೇ.20ರಷ್ಟು ಹೆಚ್ಚಿಸಿರುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಿಸಿದರು.
ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕುಟುಂಬಗಳಿಗೆ ಪ್ರತಿ ವರ್ಷ ಒಂದು ಲಕ್ಷ ರೂ.ಗಳ ಆರೋಗ್ಯ ಆರೈಕೆ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಅವರು ಪ್ರಕಟಿಸಿದರು.
100 ದಿನಗಳಲ್ಲಿ ಸುಮಾರು 50 ಲಕ್ಷ ಉಚಿತ ಎಲ್‍ಪಿಜಿ ಸಿಲಿಂಡರ್ ಸಂಪರ್ಕಗಳನ್ನು ಒದಗಿಸಲಾಗಿದೆ. ಕಬ್ಬು ಬೆಳೆಗಾರರ ಶೇ.99.5ರಷ್ಟು ಬಾಕಿಯನ್ನು ಚುಕ್ತಾ ಮಾಡಲಾಗಿದೆ. ಜಿಎಸ್‍ಟಿ(ಸರಕು ಮತ್ತು ಸೇವಾ ತೆರಿಗೆ) ದೇಶದ ಆರ್ಥಿಕ ಸ್ಥಿತಿ ಸುಧಾರಣೆಗೆ ನೆರವಾಗಲಿದೆ ಎಂದು ಅವರು ಹೇಳಿದರು.

Cp304e6XEAETIUI

Cp304e5XgAAQCPF

► Follow us on –  Facebook / Twitter  / Google+

Facebook Comments

Sri Raghav

Admin