ಕೆಂಪೇಗೌಡರ ಜಯಂತಿ ಶಾಲಾ, ಕಾಲೇಜುಗಳಲ್ಲಿ ಆಚರಿಸಿ

ಈ ಸುದ್ದಿಯನ್ನು ಶೇರ್ ಮಾಡಿ

kempegowda

ಚನ್ನಪಟ್ಟಣ, ಏ.28- ನಾಡಪ್ರಭು ಕೆಂಪೇಗೌಡರು ಎಲ್ಲಾ ವರ್ಗಗಳ ಉದ್ದಾರಕ್ಕೆ ದುಡಿದ ಮಹಾನ್ ಚೇತನ. ಬೆಂಗಳೂರಿನ ನಿರ್ಮಾತೃವಾಗಿ ರಾಜ್ಯಕ್ಕೆ ರಾಜಧಾನಿಯನ್ನು ನೀಡಿದ ವೀರ ಸೇನಾನಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‍ಗೌಡ ತಿಳಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ,ರಸ್ತೆ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರವರ ಜಯಂತಿಯಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರವರು ನಾಡಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಎಲ್ಲಾ ಸಮುದಾಯ ಒಂದೇ ಸೂರಿನಡಿ ಬದುಕುವ ಅವಕಾಶವನ್ನು ಕಲ್ಪಿಸಿದ್ದಾರೆ ಎಂದರು.

ಬೆಂಗಳೂರಿನಾದ್ಯಂತ ಕೆರೆ ಕಟ್ಟೆಗಳನ್ನು, ಗುಡಿ ಗೋಪುರಗಳನ್ನು ನಿರ್ಮಿಸಿ ಸಾಂಸ್ಕೃತಿಕ ವಾಗಿಯೂ ಶ್ರೀಮಂತಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಇಂತಹ ಒಬ್ಬ ಮಹಾನ್ ಚೇತನನ ಜಯಂತಿಯನ್ನು ಕೇವಲ ಅವರ ಸಮುದಾಯದ ಮಂದಿಯಷ್ಟೇ ಅಲ್ಲ. ಎಲ್ಲಾ ಶಾಲಾ ಕಾಲೇಜುಗಳಲ್ಲೂ, ಸರ್ಕಾರಿ ಕಛೇರಿಗಳಲ್ಲೂ ಕೆಂಪೇಗೌಡರ ಜಯಂತೋತ್ಸವವನ್ನು ಮಾಡಬೇಕೆಂದು ಆಗ್ರಹಿಸಿದರು.ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ರಸ್ತೆ ಬದಿ ವ್ಯಾಪಾರಿಗಳ ಅಧ್ಯಕ್ಷ ನಾಗೇಶ್, ವೇದಿಕೆಯ ಪದಾಧಿಕಾರಿಗಳಾದ ಸಿದ್ದಪ್ಪ, ನಾರಾಯಣ, ಬೋರ್‍ವೆಲ್ ಪುಟ್ಟು, ಬಾಳೆಮಂಡಿ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin