ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಗತವೈಭವದ ಮೆಲುಕು

ಈ ಸುದ್ದಿಯನ್ನು ಶೇರ್ ಮಾಡಿ

2

ದೇವನಹಳ್ಳಿ, ಅ.7- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೈಸೂರು ದಸರಾ ಗತವೈಭವ ಮರಳುವಂತೆ ಮಾಡಿ ಪ್ರಯಾಣಿಕರಿಗೆ ಕನ್ನಡ ಸಂಸ್ಕೃತಿ , ಕಲೆ, ಸಾಹಿತ್ಯವನ್ನು ಪರಿಚಯಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯ ನಿರ್ದೇಶಕ ಕುಮಾರ್ ನಾಯಕ್ ತಿಳಿಸಿದರು. ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಸರಾ ಉತ್ಸವ ಸಂಸ್ಕೃತಿ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಸರಾವನ್ನು ಮೈಸೂರಿನಲ್ಲಿ ಮಾತ್ರ ನೋಡುತ್ತಿದ್ದೇವು, ಆದರೆ ವಿಮಾನ ನಿಲ್ದಾಣದಲ್ಲಿ ದಸರಾ ವಿಶೇಷತೆ ಮಾಡಿ ಪ್ರಯಾಣಿಕರನ್ನು ಆಕರ್ಷಿಸುವಂತೆ ಮಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಜಾಗತಿಕ ಪ್ರಪಂಚದಲ್ಲಿ ಇಂಥಹ ಸಂಸ್ಕೃತಿ ಕ ಸಂಪ್ರದಾಯಗಳನ್ನು ಮರೆಯುತ್ತಿದ್ದೇವೆ. ಮನರಂಜನೀಯ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ದಕ್ಷಿಣ ಭಾರತದ ಶ್ರೀಮಂತ ಕಲಾ ಕೌಶಲ್ಯಗಳನ್ನು ಜಾಗತಿಕ ಪ್ರೇಕ್ಷಕರಿಗೆ ಉಣಬಡಿಸಲಿವೆ ಎಂದು ಹೇಳಿದರು.
ದಸರಾ ಗೊಂಬೆಗಳನ್ನು ಕೂರಿಸುವುದರ ಮೂಲಕ ಅದರಲ್ಲಿ ಸಮಾಜಕ್ಕೆ ಒಂದೊಂದು ಇತಿಹಾಸವನ್ನು ತಿಳಿಹೇಳುವ ಪ್ರಯತ್ನ ಮಾಡಲಾಗಿದೆ. ಬೆಂಗಳೂರಿನ ಜನತೆಗೆ ನಾಡ ಹಬ್ಬ ದಸರಾ ವೈಭವವನ್ನು ಪರಿಚಯಿಸುತ್ತಿದೆ. ಮೈಸೂರು ದಸರಾ ಅಂಬಾರಿ ಸ್ಥಾಪಿಸಿ ಇರುವುದರಿಂದ ಮೈಸೂರು ದಸರಾ ಇತಿಹಾಸ ಮೆಲಕು ಹಾಕುವಂತೆ ಆಗಿದೆ. ಈ ವೈಚಾರಿಕತೆಯನ್ನು ಬಿಂಬಿಸುವ ಬಿಐಎಲ್ ತಳಮಟ್ಟದ ಸಮುದಾಯಗಳನ್ನು ತಲುಪುವ ಉದ್ದೇಶದಿಂದ ಹಬ್ಬದ ಆಚರಣೆಯ ಸಂದರ್ಭದಲ್ಲಿ ಸೇವಾ-ಸಂಸ್ಥೆಗಳಂತಹ ಸಮುದಾಯಗಳು ಮಕ್ಕಳಿಗಾಗಿ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ನುಡಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಯ ನಿರ್ದೇಶಕ ಭಾಸ್ಕರ್ ಬೋಡಾಪಾಟೀಲ್ ಮಾತನಾಡಿ, ದಸರಾ ಕಾರ್ಯಕ್ರಮವನ್ನು ವಿಮಾನ ನಿಲ್ದಾಣದಲ್ಲಿ ಹಮ್ಮಿಕೊಂಡು ದೇಶ-ವಿದೇಶಗಳಿಂದ ಹಾಗೂ ಇತರೆ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಕನ್ನಡ ಸಂಸ್ಕೃತಿ ಯ ವೈಭವವಾದ ಭಾವಗೀತೆ, ಭರತನಾಟ್ಯ, ಯಕ್ಷಗಾನ ಹಾಗೂ ನೃತ್ಯಕಲೆಗಳನ್ನು ಪರಿಯಚಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕಾರ್ಪೊರೇಟ್  ಕಮ್ಯೂನಿಕೇಷನ್ ಸೂರಜ್ ಮರಿಯಾ ಜೋಸೆಫ್ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin