ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೇಲಂ, ಮಡಿಕೇರಿಗೆ ಫ್ಲೈ ಬಸ್ ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

Fly-02

ಬೆಂಗಳೂರು, ಜ.9- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೇಲಂ ಹಾಗೂ ಮಡಿಕೇರಿ ಫ್ಲೈ ಬಸ್ ಸೇವೆ ಪ್ರಾರಂಭವಾಗಿದೆ. ಈಗಾಗಲೇ ಮೈಸೂರಿಗೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅತ್ಯಾಧುನಿಕ ಸೌಲಭ್ಯವುಳ್ಳ ಆರು ಕುಂದಾಪುರ ಮಾರ್ಗದಲ್ಲಿ ಎರಡು ಫ್ಲೈ ಬಸ್‍ಗಳು ಸಂಚಾರ ಪ್ರಾರಂಭಿಸಿವೆ. ಸೇಲಂಗೆ ಎರಡು ಮತ್ತು ಮಡಿಕೇರಿಗೆ ಒಂದು ಫ್ಲೈ ಬಸ್‍ಗಳು ಸಂಚಾರ ಪ್ರಾರಂಭಿಸಿವೆ. ನಿನ್ನೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೊಸ ಬಸ್‍ಗಳಿಗೆ ಹಸಿರು ನಿಶಾನೆ ತೋರಿದರು.

Fly-Bus---02

ಶಾಂತಿನಗರದ ಕೆಎಸ್‍ಆರ್‍ಟಿಸಿ ಕೇಂದ್ರೀಯ ವಿಭಾಗದ ಘಟಕ-4ರಲ್ಲಿ ಫ್ಲೈ ಬಸ್‍ಗಳನ್ನು ಲೋಕಾರ್ಪಣೆ ಮಾಡಿದ ವೇಳೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್, ಉಪಾಧ್ಯಕ್ಷ ಬಸವರಾಜು ಬುಳ್ಳ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹರಿಮಾರನ್, ಉಪಾಧ್ಯಕ್ಷ ಎಚ್.ಆರ್.ವೆಂಕಟರಾಮನ್ ಮತ್ತಿತರರು ಹಾಜರಿದ್ದರು. ಫ್ಲೈ ಬಸ್‍ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೇಲಂಗೆ ಸಂಚರಿಸಲು 800ರೂ. (+ತೆರಿಗೆ), ಮಡಿಕೇರಿಗೆ 1000ರೂ. (+ಜಿಎಸ್‍ಟಿ) ಇರುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರು ಮಾರ್ಗದಲ್ಲಿ ಮೂರು ಮತ್ತು ಅದಕ್ಕಿಂತ ಹೆಚ್ಚಿನ ಪ್ರಯಾಣಿಕರು ಒಟ್ಟಿಗೆ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಮೂಲ ದರದ ಮೇಲೆ ಶೇ.12.70ರಷ್ಟು ರಿಯಾಯಿತಿ ನೀಡಲಾಗುತ್ತದೆ.

Fly-Bus---01

Facebook Comments

Sri Raghav

Admin