ಕೆಂಪೇಗೌಡ ವಿಮಾನ ನಿಲ್ದಾಣದಿಂದ 26 ಕೋಟಿ ತೆರಿಗೆ ಬಾಕಿ

ಈ ಸುದ್ದಿಯನ್ನು ಶೇರ್ ಮಾಡಿ

Kempegowda-001

ದೇವನಹಳ್ಳಿ,ಸೆ.4– ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಅಣ್ಣೇಶ್ವರ ಪಂಚಾಯಿತಿಗೆ ಪಾವತಿಸಬೇಕಾಗಿದ್ದ ಸುಮಾರು 26ಕೋಟಿಗೂ ಹೆಚ್ಚು ಕಂದಾಯವನ್ನು ಬಾಕಿ ಉಳಿಸಿಕೊಂಡಿದೆ.  ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ತಿಳಿಸಿದ ಅಣ್ಣೇಶ್ವರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ ಮುರಳಿ ಅವರು, 2010ರಿಂದ 2016ರವರೆಗೆ ಕಂದಾಯವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಪಾವತಿಸಿಲ್ಲ. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ನ್ಯಾಯಾಲಯದ ಆದೇಶದಂತೆ ಶೇ.50ರಷ್ಟು ತೆರಿಗೆ ಪಾವತಿಸಬೇಕು, ಆದರೆ ಪ್ರಾಧಿಕಾರ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿಸಿತ್ತು. ಅಲ್ಲೂ ಸಹ ಜಿಪಂ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಸೂಚಿಸಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಗೆ ದೊಡ್ಡಜಾಲ, ಅಣ್ಣೇಶ್ವರ, ಬೆಟ್ಟಕೋಟೆ, ಬಂಡಿಕೊಡಿಗೆ ಹಳ್ಳಿ ಗ್ರಾಮ ಪಂಚಾಯ್ತಿಗಳು ಬರುಲಿವೆ ಅದರಲ್ಲಿ ಅಣ್ಣೇಶ್ವರ ಗ್ರಾಪಂ ವ್ಯಾಪ್ತಿಗೆ 2650 ಎಕರೆ ಬರಲಿದ್ದು, ಅದಕ್ಕೆ ತೆರಿಗೆ ಪಾವತಿಸಬೇಕಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರವು ನ್ಯಾಯಾಂಗದ ಆದೇಶ ಉಲ್ಲಂಘನೆ ಮಾಡಿದೆ ಎಂದು ದೂರಿದ ಅವರು, ಈ ತೆರಿಗೆ ಹಣ ಬಂದರೆ ಪಂಚಾಯ್ತಿಯು ಹೆಚ್ಚು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಅನುಕೂಲವಾಗುತ್ತದೆ ಎಂದು ವಿವರಿಸಿದರು.

ಗ್ರಾಪಂ ಸದಸ್ಯ ಮುನಿರಾಜು ಮಾತನಾಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಕಂದಾಯ ಕಟ್ಟದೆ ಇರುವುದು ಕಾನೂನು ಉಲ್ಲಂಘನೆಯಾಗಿದೆ. ಪಂಚಾಯ್ತಿಗೆ ಸೇರಬೇಕಾಗಿರುವ ಶೇ.50ರಷ್ಟು ತೆರಿಗೆ ನೀಡಬೇಕೆಂಬ ಮೇಲ್ಮನವಿ ಇರುವುದರಿಂದ ಕೂಡಲೇ ಪ್ರಾಧಿಕಾರ ಕಟ್ಟಬೇಕು. ಇದ್ದಕ್ಕೆ ಸಂಬಂಧಿಸಿದಂತೆ ಸೆ.9ರಂದು ಮೊಕದ್ದಮೆಯು ಜಿಲ್ಲಾ ಪಂಚಾಯಿತಿ ನ್ಯಾಯಾಲಯದಲ್ಲಿ ನಡೆಯಲಿದೆ. ಇದಕ್ಕೆ ಕಾನೂನು ತಜ್ಞರನ್ನು ನೇಮಿಸಿ ಚರ್ಚಿಸಲಾಗುವುದು ಎಂದು ಹೇಳಿದರು. ಇದೇ ಸಂಧರ್ಭದಲ್ಲಿ ಗ್ರಾಪಂ ಸದಸ್ಯ ಮುನಿಕೃಷ್ಣಪ್ಪ, ದೀಪಾ, ಅನಿತಾ, ದೇವಿಕಾ, ಮುನಿಯಪ್ಪ ಮತ್ತಿತರರು ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin