ಕೆಆರ್‍ಪುರದಲ್ಲಿ ಬೆಂಗಳೂರು-ಒನ್ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

 

KR-puram
ಕೆ.ಆರ್.ಪುರ,ಫೆ.3- ವಿದ್ಯುತ್ ಬಿಲ್ ನೀರಿನ ಬಿಲ್ ಪಾವತಿಸಲು ಬೇರೆಡೆಗೆ ಮೂರು-ನಾಲ್ಕು ಕಿ.ಮೀ ನಡೆದು ಹೋಗಬೇಕಾಗಿತ್ತು. ಇದೀಗ ನಮ್ಮ ವಾರ್ಡ್‍ನಲ್ಲೇ ಬೆಂಗಳೂರು ಒನ್ ಕೇಂದ್ರ ಪ್ರಾರಂಭವಾಗಿರುವುದು ಸಮಾಧಾನ ತಂದಿದೆ ಎಂದು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಎ.ನಾರಾಯಣಪುರ ವಾರ್ಡ್ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.   ಇಂದು ಬೆಳಗ್ಗೆ ಎ.ನಾರಾಯಣಪುರ ವಾರ್ಡ್ ಬಿಬಿಎಂಪಿ ಕಚೇರಿ ಪಕ್ಕದಲ್ಲಿ ಬೆಂಗಳೂರು ಒನ್ ಕೇಂದ್ರಕ್ಕೆ ಶಾಸಕ ಭೈರತಿ ಬಸವರಾಜು ಚಾಲನೆ ನೀಡಿದರು.   ವಾರ್ಡ್‍ನಲ್ಲಿ ಬೆಂಗಳೂರು ಒನ್ ಕೇಂದ್ರ ಪ್ರಾರಂಭಿಸುವ ಮೂಲಕ ಸ್ಥಳೀಯರ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ವಿವಿಧ ರೀತಿಯ ಬಿಲ್ ಪಾವತಿಸಲು ಇಲ್ಲಿನ ಜನರು ಬಹಳ ದೂರ ಹೋಗಬೇಕಾಗಿತ್ತು. ಇಲ್ಲೇ ಬೆಂಗಳೂರು ಒನ್ ಪ್ರಾರಂಭವಾಗಿರುವುದರಿಂದ ಅವರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ವಾರ್ಡ್‍ನಲ್ಲಿ 5 ಕೋಟಿ ರೂ. ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಗುಣಮಟ್ಟ ಕಾಪಾಡಬೇಕು ಎಂದು ಸೂಚಿಸಿದರು.  ಪಾಲಿಕೆ ಸದಸ್ಯ ಸುರೇಶ್ ಮಾತನಾಡಿ, ಬೆಂಗಳೂರು ಒನ್ ಕೇಂದ್ರದ ಉಪಯೋಗವನ್ನು ಪಡೆದು ಕೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿದರು. ಯಾವುದೇ ಸಮಸ್ಯೆ ಬಂದರೂ ತಮ್ಮನ್ನು ಸಂಪರ್ಕಿಸಿದರೆ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದರು.   ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿರ್ದೇಶಕ ಎನ್.ಜ್ಯೋತಿಪ್ರಕಾಶ್, ಮುಖಂಡ ಸುಬ್ಬಾರೆಡ್ಡಿ , ಬಿಬಿಎಂಪಿ ಇಂಜಿನಿಯರ್‍ಗಳಾದ ಭಾಗ್ಯಮ್ಮ, ಅಪ್ಪುರಾಜ್ ಹಾಗೂ ಸತೀಶ್ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin