ಕೆಆರ್ ಮಾರುಕಟ್ಟೆಗೆ ದಿಢೀರ್ ಭೇಟಿ, ಕಸದ ರಾಶಿ ಕಂಡು ಕೆಂಡಾಮಡಲರಾದ ಮೇಯರ್ ಪದ್ಮಾವತಿ

ಈ ಸುದ್ದಿಯನ್ನು ಶೇರ್ ಮಾಡಿ

Meyor
ಬೆಂಗಳೂರು, ಅ.14– ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಅವರು ಇಂದು ಕೆಆರ್ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಕಸದ ಅವಾಂತರ ನೋಡಿ ಕೆಂಡಾಮಂಡಲವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಾಶಿ ರಾಶಿ ಕಸವಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳದಲ್ಲಿಯೇ ಕ್ರಮ ಜರುಗಿಸಿಯೇಬಿಟ್ಟರು.  ಕಸ ವಿಲೇವಾರಿ ಸಮರ್ಪಕವಾಗಿ ಮಾಡದ ಸಹಾಯಕ ಎಂಜಿನಿಯರ್ ಬಸವರಾಜ್ ಅವರಿಗೆ ಶೋಕಾಸ್ ನೋಟಿಸ್ ನೀಡುವಂತೆ ಸೂಚಿಸಿದರಲ್ಲದೆ ಸಂಬಂಧಪಟ್ಟ 50 ಅಧಿಕಾರಿಗಳಿಗೆ 15 ದಿನ ಸಂಬಳ ಕಡಿತ ಮಾಡುವಂತೆ ಪದ್ಮಾವತಿ ಅವರು ಆದೇಶಿಸಿದರು. ಮೇಯರ್ ಆದ ನಂತರ ಮೊದಲ ಬಾರಿ ಕೆಆರ್ ಮಾರುಕಟ್ಟೆಗೆ ಭೇಟಿ ನೀಡಿ ಅವರಿಗೆ ಸಿಕ್ಕಿದ್ದು ಕಸದ ಸ್ವಾಗತ. ಕಸದ ಮಧ್ಯೆಯೇ ನಡೆದು ಹೋದ ಪದ್ಮಾವತಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Meyor-2

ಮೇಯರ್‍ರೊಂದಿಗಿದ್ದ ಜಂಟಿ ಆಯುಕ್ತ ಸಫ್ರಾಜ್‍ಖಾನ್ ಅವರು ಸ್ಥಳದಲ್ಲಿದ್ದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.  ಕೆಆರ್ ಮಾರುಕಟ್ಟೆ ವ್ಯಾಪಾರ-ವಹಿವಾಟು ನಡೆಯುವ ಸ್ಥಳ ಅಚ್ಚುಕಟ್ಟು ನಿರ್ವಹಣೆ ಮಾಡಬೇಕಾದುದು ಸಿಬ್ಬಂದಿಗಳ ಕರ್ತವ್ಯ. ಆದರೂ ಇಷ್ಟು ನಿರ್ಲಕ್ಷ್ಯ ಏಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾಳೆಯಿಂದ ಎಂಟು ವಾಹನಗಳನ್ನು ಕಸ ತೆರವು ಮಾಡಲು ನಿಯೋಜನೆ ಮಾಡುವುದಾಗಿ ಮೇಯರ್ ಅವರಿಗೆ ಸಮಜಾಯಿಷಿ ನೀಡಿದರು.  ಮೇಯರ್ ಪದ್ಮಾವತಿಯವರು ಯಾವುದೇ ಮುಲಾಜು ನೋಡದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಸಂಬಳ ಕಡಿತ ಮಾಡಿ ಎಇಗೆ ಶೋಕಾಸ್ ನೋಟಿಸ್ ನೀಡಿ ಎಂದು ಖಡಕ್ ಸೂಚನೆ ನೀಡಿದರು. ಕತ್ತಲೆಯಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಪರಿಶೀಲನೆ ಮಾಡಿದರು.  ಈ ಸಂದರ್ಭದಲ್ಲಿ ಉಪಮೇಯರ್ ಆನಂದ್, ಸ್ಥಳೀಯ ಪಾಲಿಕೆ ಸದಸ್ಯರು ಜತೆಯಲ್ಲಿದ್ದರು.

► Follow us on –  Facebook / Twitter  / Google+

Meyor-1

Facebook Comments

Sri Raghav

Admin