ಕೆಎಂಎಫ್‍ಗೆ ಶೀಘ್ರದಲ್ಲೇ ನೂತನ ಅಧ್ಯಕ್ಷರ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

KMF-Nandini

ಬೆಂಗಳೂರು,ಡಿ.1- ಎರಡೂವರೆ ವರ್ಷದ ಅವಧಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನಿರ್ವಹಿಸುವ ಕುರಿತಂತೆ ಪಕ್ಷದ ವೇದಿಕೆಯಲ್ಲಿ ತೀರ್ಮಾನ ವಾಗಿತ್ತು. ಅದರಂತೆ ಅಧ್ಯಕ್ಷ ಬಿ.ನಾಗರಾಜ್ ಅವರ ಸ್ಥಾನಕ್ಕೆ ಸದ್ಯದಲ್ಲೇ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಲಿದ್ದೇವೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ 36ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಬಳಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಿನ ಅಧ್ಯಕ್ಷ ಬಿ.ನಾಗರಾಜ್ ಅವರು ಕಳೆದ 16ರಂದೇ ರಾಜೀನಾಮೆ ನೀಡಬೇಕಿತ್ತು. ಆದರೆ, ರಾಮನಗರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಸದ್ಯದಲ್ಲೇ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದರು.

ಈ ಸ್ಥಾನಕ್ಕೆ ಶಾಸಕ ರವೀಂದ್ರ , ಮಾಜಿ ಸಚಿವ ಪರಮೇಶ್ವರ್ ನಾಯಕ್ ಸೇರಿದಂತೆ ಕೆಲವರ ಹೆಸರು ಪಸ್ತಾಪವಾಗಿದ್ದು ಪಕ್ಷದ ವೇದಿಕೆಯಲ್ಲಿ ಆಯ್ಕೆ ಮಾಡಲಿದ್ದೇವೆ ಎಂದರು.
ನಾಗರಾಜ್ ಅವರ ಅವಧಿಯಲ್ಲಿ ಕೆಎಂಎಫ್‍ನಲ್ಲಿ ಉತ್ತಮ ಕೆಲಸ ನಡೆದಿದೆ. 2ರೂ. ಇದ್ದ ಹಾಲಿನ ಪ್ರೋತ್ಸಾಹ  ಧನ 5ರೂ.ಗೆ ಹೆಚ್ಚಾಗಿದೆ. ಒಂದು ಸಾವಿರ ಕೋಟಿ ಮೌಲ್ಯದ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದು ವಿವರಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin