ಲಾರಿ-ಬಸ್ ನಡುವೆ ಮುಖಾಮುಖಿ ಡಿಕ್ಕಿ, 7 ಮಂದಿ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

Accidet--Kasfsdgf

ಗೌರಿಬಿದನೂರು, ಜೂ.9– ಲಾರಿ ಮತ್ತು ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ,ನಿರ್ವಾಹಕಿ ಸೇರಿದಂತೆ 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ರಸ್ತೆಯ ಕೆಎಂಎಫ್ ಶೀಥಲೀಕರಣ ಘಟಕದ ಬಳಿ ಇಂದು ಬೆಳಗ್ಗೆ ಜರುಗಿದೆ.  ಅಪ್ತರ್ ಉನ್ನೀಸಾ(55),ಮುಬಾರಖ್(36) ತಾಲೂಕಿನ ಡಿ.ಪಾಳ್ಯ ಗ್ರಾಮದ ವಾಸಿಗಳು, ನಗರಗೆರೆಯ ರಾಜೇಶ್,(19) ರಾಜಾನುಕುಂಟೆಯ ವಸಂತ್‍ಕುಮಾರ್,(54) ಬೊಮ್ಮಸಂದ್ರ ಗ್ರಾಮದ ಗಂಗಾಧರ್(45), ಜೀಲಾಕುಂಟೆಯ ಎನ್.ಗಂಗಾಧರಪ್ಪ(53) ಚಾಲಕ ಚಂದ್ರಪ್ಪ, ನಿರ್ವಾಹಕಿ ರಾಧಮ್ಮ ಗಂಬೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.ಗೌರಿಬಿದನೂರು ನಿಲ್ದಾಣದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್‍ಗೆ ಸರಕು ಸಾಗಾಣಿಕೆ ಲಾರಿ ಮುಂದೆ ಹೋಗುತ್ತಿದ್ದ ಮತ್ತೊಂದು ಲಾರಿಯನ್ನು ಹಿಮ್ಮೆಟ್ಟಿಸಲು ಹೋಗಿ ಡಿಕ್ಕಿಯಾಗಿದೆ.   ಚಾಲಕ ಚಂದ್ರಪ್ಪ ತನ್ನ ಸಮಯ ಪ್ರಜ್ಞೆಯಿಂದ ಯಾವುದೇ ರೀತಿ ಅನಾಹುತ ಸಂಭವಿಸದಂತೆ ಬಸ್‍ನ್ನು ಏಕಾಏಕಿ ಎಡಕ್ಕೆ ತಿರುಗಿಸಿದ್ದು, ಕೆಎಂಎಫ್ ಶೀಥಲ ಘಟಕದ ಕಾಂಪೌಡ್ ಗೋಡೆಗೆ ಡಿಕ್ಕಿ ಹೊಡೆದಿದೆ. ಲಾರಿಯೂ ಸಹ ಬಸ್‍ಗೆ ಡಿಕ್ಕಿಯಾಗಿದೆ.

Accidet--Kasfsdgf-1

ಸ್ಥಳಕ್ಕೆ ವೃತ್ತ ನಿರೀಕ್ಷ ಎಂ.ವಿ.ಶೇಷಾದ್ರಿ, ಮಂಚೇನಹಳ್ಳಿ ಎಸ್‍ಐ ಮಂಜುನಾಥ್, ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿ ಚಾಲಕ ಪರಾರಿಯಾಗಿದ್ದು, ಈ ಸಂಬಂಧ ಮಂಚೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದೇ ಮಾರ್ಗದಲ್ಲಿ ಗೌರಿಬಿದನೂರು ಕಡೆಗೆ ಕಾರಿನಲ್ಲಿ ಬರುತ್ತಿದ್ದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಜಿ.ವೇಣುಗೋಪಾಲರೆಡ್ಡಿ ತಕ್ಷಣ 108 ಆ್ಯಂಬುಲೆನ್ಸ್ ಸುದ್ದಿ ಮುಟ್ಟಿಸಿ ಬಸ್‍ನಲ್ಲಿದ್ದ ಗಾಯಾಳುಗಳನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Accidet--Kasfsdgf-3

Facebook Comments

Sri Raghav

Admin