ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಮುಂಬಡ್ತಿ ನೀಡುವ ಕುರಿತು ದೆಹಲಿಯಲ್ಲಿ ಯುಪಿಎಸ್‍ಸಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

IAS

ನವದೆಹಲಿ, ಫೆ.23– ಕರ್ನಾಟಕ ಆಡಳಿತ ಸೇವೆ (ಕೆಎಎಸ್), ಕರ್ನಾಟಕ ಪೊಲೀಸ್ ಸೇವೆ (ಕೆಪಿಎಸ್)ಯಿಂದ ಭಾರತೀಯ ಆಡಳಿತ ಸೇವೆಗೆ(ಐಎಎಸ್)ಮುಂಬಡ್ತಿ ನೀಡುವ ಸಂಬಂಧ ಕೇಂದ್ರ ಲೋಕಸೇವಾ ಆಯೋಗ ಸಭೆ ಇಂದು ನಡೆದಿದೆ. ರಾಜ್ಯದ 35 ಮಂದಿ ಹಿರಿಯ ಕೆಎಎಸ್ ಅಧಿಕಾರಿಗಳನ್ನು ಐಎಎಸ್‍ಗೆ ಬಡ್ತಿ ನೀಡುವಂತೆ ಹಾಗೂ ಮೂರು ಮಂದಿ ಕೆಎಸ್‍ಪಿಎಸ್ ಅಧಿಕಾರಿಗಳನ್ನು ಐಪಿಎಸ್‍ಗೆ ಬಡ್ತಿ ನೀಡುವಂತೆ ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.  ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಆ ಅವರು ಇಂದು ಯುಪಿಎಸ್ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಐಎಎಸ್, ಐಪಿಎಸ್ ಬಡ್ತಿಯ ಬಗ್ಗೆ ಪಟ್ಟಿ ಸಿದ್ದಪಡಿಸಿ ಇತ್ತೀಚೆಗೆ ಯುಪಿಎಸ್‍ಗೆ ಕಳುಹಿಸಿಕೊಟ್ಟಿತ್ತು.

ಯುಪಿಎಸ್‍ಸಿ ಬಡ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಭೆ ನಡೆಸಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡು ಬಡ್ತಿಯ ವಿಚಾರದ ಬಗ್ಗೆ ಸಮಾಲೋಚನೆ ನಡೆಸಿದರು.  ಕೆಎಎಸ್‍ನಿಂದ ಐಎಎಸ್‍ಗೆ ಬಡ್ತಿ ನೀಡಲು ರಾಜ್ಯ ಸರ್ಕಾರ ಸಿದ್ದಪಡಿಸಿದ್ದ ಪಟ್ಟಿಯ ಬಗ್ಗೆ ಹಲವು ಆಕ್ಷೇಪಗಳು ಕೂಡ ಇತ್ತೀಚೆಗೆ ವ್ಯಕ್ತವಾಗಿದ್ದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin