ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಚಿನ್ನಾಭರಣ, 1.58 ಲಕ್ಷ ರೂ. ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

KSRTC-Gold

ಬಳ್ಳಾರಿ, ಏ.19- ಬೆಳ್ಳಂ ಬೆಳಗ್ಗೆ ಎಸ್‍ಎಸ್‍ಟಿ ತಂಡ ಹೂವಿನ ಹಡಗಲಿ ಸಮೀಪ ತಪಾಸಣೆ ನಡೆಸುತ್ತಿದ್ದ ವೇಳೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ವ್ಯಕ್ತಿಯೊಬ್ಬರು ಕೊಂಡೊಯ್ಯುತ್ತಿದ್ದ ಸುಮಾರು 201 ಗ್ರಾಂ ಚಿನ್ನಾಭರಣ ಹಾಗೂ 1.58 ಲಕ್ಷ ರೂ. ಪತ್ತೆಯಾಗಿದ್ದು , ಆತನನ್ನು ವಿಚಾರಣೆಗೊಳಪಡಿಸಲಾಗಿದೆ. ಮಂಜುನಾಥ್ ಎಂಬಾತನನ್ನು ಬಂಧಿಸಲಾಗಿದೆ. ಗಂಗಾವತಿಯಿಂದ ಶಿಕಾರಿಪುರಕ್ಕೆ ಹೋಗುತ್ತಿದ್ದ ಬಸ್‍ನಲ್ಲಿ ಮಂಜುನಾಥ್ ಪ್ರಯಾಣಿಸುತ್ತಿದ್ದ ಹೂವಿನ ಹಡಗಲಿ ಬಳಿ ಮಹಾಜನ ನಗರ ಚೆಕ್‍ ಪೋಸ್ಟ್ ನಲ್ಲಿ ಚುನಾವಣಾಧಿಕಾರಿಗಳೊಂದಿಗೆ ಎಸ್‍ಎಸ್‍ಟಿ ತಂಡ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಬಸ್‍ನಲ್ಲೂ ತಪಾಸಣೆ ನಡೆಸಿದರು.

ಈ ವೇಲೆ ಮಂಜುನಾಥ್ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದಾನೆ. ತಕ್ಷಣ ಅವನ ಬ್ಯಾಗ್ ಪರಿಶೀಲಿಸಿದಾಗ 201 ಗ್ರಾಂ ಚಿನ್ನಾಭರಣ ಮತ್ತು 1.58 ಲಕ್ಷ ರೂ. ಇದ್ದುದು ಪತ್ತೆಯಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಶಿರಗುಪ್ಪಾಗೆ ಹೋಗುತ್ತಿರುವುದಾಗಿ ಹೇಳಿದ್ದಾನೆ. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೆ ಮಂಜುನಾಥ್ ತಡಬಡಾಯಿಸಿದ್ದಾನೆ. ಎಸ್‍ಎಸ್‍ಟಿ ತಂಡ ಆತನನ್ನು ಬಂಧಿಸಿ ಚಿನ್ನ ಹಾಗೂ ಹಣವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದೆ.

Facebook Comments

Sri Raghav

Admin