ಕೆಎಸ್‍ಆರ್‍ಪಿ ಆಯ್ಕೆ ಪರೀಕ್ಷೆ ವೇಳೆ ಅಭ್ಯರ್ಥಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

KSRP

ಕಲಬುರಗಿ,ಜ.31-ಕೆಎಸ್‍ಆರ್‍ಪಿ ಆಯ್ಕೆಯ ಪರೀಕ್ಷೆ ವೇಳೆ ಅಭ್ಯರ್ಥಿಯೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ನಿವಾಸಿ ವಿಕಾಸ್ ಗಾಯಕ್‍ವಾಡ್ ಮೃತಪಟ್ಟ ಅಭ್ಯರ್ಥಿ. ಇಂದು ಕೆಎಸ್‍ಆರ್‍ಪಿ ಆಯ್ಕೆ ಪರೀಕ್ಷೆಗಾಗಿ ಜಿಲ್ಲೆಯ ಪರೇಡ್ ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಯುತ್ತಿದ್ದು , ಈ ಹಿನ್ನೆಲೆಯಲ್ಲಿ ಬೀದರ್‍ನ ನಿವಾಸಿ ವಿಕಾಸ್ ಗಾಯಕ್‍ವಾಡ್ ಪರೀಕ್ಷೆಗೆ ಹಾಜರಾಗಿದ್ದು, ಓಟದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಈಶಾನ್ಯ ವಲಯ ಐಜಿಪಿ ಮುರುಗನ್ ಹಾಗೂ ಎಸ್‍ಪಿ ಎನ್.ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin